"ಮರೆಯಾಗುತ್ತಿವೆ,ನಮ್ಮ ನಾಡು‍ನುಡಿಯ ಗಾದೆಗಳು"!

"ಮರೆಯಾಗುತ್ತಿವೆ,ನಮ್ಮ ನಾಡು‍ನುಡಿಯ ಗಾದೆಗಳು"!

                ನಮ್ಮ ಪೂವಿ೵ಕರು ಪ್ರತಿಯೊಂದು ಘಟ್ಟದಲ್ಲಿಯೂ ಗಾದೆ ಮಾತುಗಳನ್ನು ಬಳಸಿ,ಬಾಷೆಯ ಸೌಂದರ್ಯವನ್ನ,ಮಾತಿನ ವೈಕರಿಯನ್ನ ಕಂಡುಕೊಂಡಿದ್ದರು.ಆದರೆ ಇಂದು ಆ ಗಾದೆ ಮಾತುಗಳು ಕೇಳಿಬರುವುದು,ತುಂಬ ಕಠಿಣವಾಗಿದೆ.ಕೇವಲ ಪರೀಕ್ಷೆಗಳಲ್ಲಿ ಮಾತ್ರ ಮಕ್ಕಳಿಗೆ ಕೆಲವೊಂದು ಗಾದೆ ಮಾತುಗಳು ಪರಿಚಿತವಾಗಿವೆ.


"ವೇದ ಸುಳ್ಳಾದರು ಗಾದೆ ಸುಳ್ಳಾಗದು" ಎಂಬುದು ಗಾದೆಗಿರುವ ಮತ್ತೊಂದು ಗಾದೆ ಮಾತು! ಈ ಮಾತೆ ನಮಗೆ ಗಾದೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತದೆ. ಗಾದೆಗಿರುವ ಶಕ್ತಿಯೆ ಅಂತಹದ್ದು, "ಆಡು ಮಟ್ಟದ ಸೊಪ್ಪಲ್ಲ" ಎಂಬುವಂತೆ ಗಾದೆ ಬರದ ಮನುಷ್ಯನಿಲ್ಲ,ಗಾದೆ ಇರದ ಬಾಷೆಯಿಲ್ಲ.   ಗಾದೆಮಾತು ನಮ್ಮ ಮಾತಿನ ಉದ್ದೇಶವನ್ನ,಻ದರ ಹಿಂದಿರುವ ಆಶಯವನ್ನ ,ಅಥವಾ ಆಕ್ರೋದವನ್ನ ತಿಳಿಸುತ್ತದೆ. ಯಾವುದೇ ಒಂದು ಸಂದಭ೵ದಲ್ಲಿ,ನೇರವಾಗಿ ತಿಳಿಸಲಾಗದ ಻ದೇಷ್ಟೊ ಮಾತುಗಳನ್ನು ಗಾದೆಗಳ ಮೂಲಕ ನಾವು ವ್ಯಕ್ತಪಡಿಸುತ್ತೆವೆ.ಅದು ನಮ್ಮ ಸಹಜ ಗುಣಸ್ವಬಾವ.ಕೆಲವೊಂದು ಗಾದೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಪಿಸುತ್ತೇನೆ.....................................!


"ಮಾತು ಬಲ್ಲವನಿಗೆ ಜಗಳವಿಲ್ಲ,ಊಟ ಬಲ್ಲವನಿಗೆ ರೋಗವಿಲ್ಲ"


"಻ಡಿಕೆಯಲ್ಲಿ ಹೋದ ಮಾನ ಆನೆಕೊಟ್ಟರು ಬರುವುದಿಲ್ಲ"


"ತಾಯಿ ತಾಯಿನಾಡು ಸ್ವಗ೵ಕ್ಕಿಂತಲು ಮಿಗಿಲು"


"ತಾಯಿಂಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ"


಻ಕ್ಕನ ಮೇಲೂ ಪ್ರೀತಿ-ಅಕ್ಕಮೇಲೂ ಆಸೆ!


ಹುಟ್ಟುತ್ತ ಻ಣ್ಣ-ತಮ್ಮಂದುರೂ ಬೆಳೆಯುತ್ತ ದಾಯಾದಿಗಳು


ರಕ್ತಕ್ಕಿಂತ ರಕ್ತಸಂಬಂಧ ಗಟ್ಟಿ


ಎತ್ತು ಎರಿಗೆ,ಎಮ್ಮೆ ನೀರಿಗೆ!


ಬೆಳೆಯುವ ಸಿರಿ ಮೊಳಕೆಯಲ್ಲಿ


ಆನೆ ಇದ್ದರು ಸಾವಿರ ಸತ್ತರು ಸಾವಿರ!


ಪಾಪಿ ಸಮುದ್ರಕೊದರೂ ಮೊಳಕಾಲುದ್ದ ನೀರು


ಬೊಗಸೆಯಷ್ಟು ಆಗದಿದ್ದರು,ಮುಷ್ಟಿಯಷ್ಟಾದರು ದಾನ ಮಾಡು'


ಅಂಗೈ ಉಣ್ಣೆಗೆ ಕನ್ನಡಿ ಬೇಕೆ?


ಈಗೆ ನಮ್ಮ ಪ್ರತಿ ಮಾತುಗಳಲ್ಲಿಯೂ ಸಹ ನಾವು ಗಾದೆಗಳನ್ನು ಬಳಸುತ್ತೇವೆ.ಹತ್ತಾರು ಮಾತುಗಳಲ್ಲಿ ಹೇಳಬಹುದಾದನ್ನ, ಒಂದೇಮಾತಿನಲ್ಲಿ ಹೇಳುವ ಸಾಮಥ೵ ಗಾದೆ ಮಾತಿಗಿದೆ!


ಅಂದಮೇಲೆ ನಮ್ಮ ತನದ,ನಮ್ಮನುಡಿಯ ಗಾದೆಮಾತುಗಳನ್ನ ಉಳಿಸೋಣ ಬೇಳೆಸೋಣ                                                                                  


 


                                                                                                                                                                                                 ಸುಜಾ,,,,,,,,,,,,,,,,,


 


 


 

Comments