ಮರೆಯಾದವಳು ಮತ್ತು ಕೆಲವು ಹನಿಗಳು

ಮರೆಯಾದವಳು ಮತ್ತು ಕೆಲವು ಹನಿಗಳು

ಕವನ

ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ

ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ

 

ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು

ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು

 

ಉಪ್ಪುಕಾರ ಹುಳಿಯ ತಿಂದು ಬೆಳೆದಿರುವ ದೇಹವಿದುವು

ತಪ್ಪು ಮಾಡದಿರುವುದೆಯಿಂದು ಅರಿತು ನಡೆವೆನೆಂದಿಗು

 

ಕಷ್ಟವಿರಲಿ ನಷ್ಟವಿರಲಿ ಬಯಲಿಗಂತು ದೂಡೆನು

ಗಂಜಿವೂಟ ಬಡಿಸಿ ನಿನಗೆ ನಾನು ಹಸಿದೆ ಇರುವೆನು

 

ಕೋಪತಾಪವೇನೆಯಿರಲಿ ಕೈಯ ಹಿಡಿದು ಬಾರೆ ಬೇಗ

ಅಪ್ಪುಗೆಯ ಕ್ಷಣದಲೀಗ ಎಲ್ಲವನ್ನು ಮರೆಯುತ

 

ಸಣ್ಣತನವು ಬೇಡಯಿವಳೆ ಮತ್ತೆ ಬಂದು ಸೇರಿಬಿಡು

ಒಡಲಿನೊಳಗೆ ಪ್ರೀತಿ ಇಹುದು ತಿಳಿಯು ನೀನೆ ಸವಿಯು

***

ಹನಿಗಳು

 

ಮನವಿಹುದು

ತನುವೊಳಗೆ ,ನೀನು

ತಿಳಿಯಾಗಿಸು !

 

ಹಳಿಯ ಮೇಲೆ

ಸಾಗಿದಂತೆ , ನೀ ರೈಲು

ಬಿಡಬೇಡವೊ !

 

ಕಣ್ಣೀರಿನಲ್ಲಿ

ಕೈ ತೊಳೆದೆ ನಾನಿಂದು

ನೀನೆಲ್ಲಿ ಸಿಂಧೂ !

 

ಗಂಡಸು ಇಂದು

ರಮಣಿಯ ಎದುರು

ಒಣ ಕೊಂಬೆಯು !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್