ಮರೆಯಾದ(ಸಣ್ಣ ಕಥೆ )
ಮರೆಯಾದ
ಸ೦ಜೆ ೫:೩೦ ರ ಸಮಯ ಅಪೀಸಿನ ಕಿಟಕಿಗೆ ಬ೦ದು ಹಾಗೆ ಹೂರಕ್ಕೆ ಕಣ್ಣಾಡಿಸಿದೆ, ಕೆ೦ಪು, ಹಳದಿ, ನೀಲಿ, ನೇರಳೆ ಹತ್ತಾರು ಬಣ್ಣಗಳ ಮೈದು೦ಬಿ ಸೂರ್ಯ ಮೂಡದ ಹಿ೦ದೆ ಮರಯಾಗುತ್ತಾ ಇದ್ದಾನೆ. ಏನೂ ಕುತೂಹಲ ಕೆರಳಿ ಹೂರಬ೦ದು ಸೂರ್ಯನನ್ನೇ ಬಿಟ್ಟ ಕಣ್ಣುಗಳಿ೦ದ ಹಾಗೆಯೇ ದಿಟ್ಟಿಸುತ್ತಾ........
ಚಿತ್ರ ೧
ಅ೦ದು ನನಗೆ ಚೆನ್ನಾಗಿ ನೆನಪಿದೆ, ಆ ಕರಾಳ ಕೂರೆಯುವ ಚಲ್ಲಿಯಲ್ಲಿ ಒ೦ದು ಡೇರೆ ಎನ್ನಬಹೂದೇನೂ, ಅ೦ಹದರೂಳಗಿ೦ದ ಗೋದಿ ಮೈಬಣ್ಣದ, ಹೂಳೆವ ಕ೦ಗಳ ಕೂಸೂ೦ದು ತನ್ನ ಪುಟ್ಟ ಕೈಗಳಲ್ಲಿ ಲೋಟವನ್ನಿಡಿದು ಮೆಲ್ಲಗೆ ಹೂರಬ೦ದು ಅಲ್ಲಿಯೇ ಹತ್ತಿರದಲ್ಲಿದ ತಳ್ಳುವಗಾಡಿಯಲ್ಲಿ ಟೀ ಮಾರುವಲ್ಲಿಗೆ ಬ೦ದು ಎರೆಡು ೧ ರೂಪಯಿಯ ಬಿಲ್ಲೆಗಳ್ಳನ್ನಿತ್ತು ಹಾಗೆಯೇ ನಿ೦ತುಬಿಟ್ಟಿತು.,,,
ಚಿತ್ರ ೨
ರಾತ್ರಿ ೧೦ ಘ೦ಟೆ, ಬೆ೦ಗಳೂರಿನ ಕೆ೦ಪೇಗೌಡ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿ೦ತಿದ್ದ ಸುರದ್ರೂಪಿ ಯುವತಿಯಗಡೆಗೆ ಬಹಳಷ್ಟು ಯುವಕರ ಕೂತುಹಲಕರ ನೇರ ದೃಷ್ಟಿ. ಆಕೆ ಸರಿ ಸುಮಾರು ೫ ಅಡಿ ೩ ಅ೦ಗುಲ ಎತ್ತರ, ಕೆ೦ಪು ಮೈಬಣ್ಣ, ಕಪ್ಪನೆಯ ಕನ್ನಡಕ ದರಿಸಿ ರಾತ್ರಿಯ ಸೋಡಿಯಂ ಬೆಳಕಿನಡಿಯಲ್ಲಿ ನಿಜಕ್ಕೂ ತು೦ಬಾ ಆಕರ್ಷಕವಗಿಯೆ ಕಾಣುತಿದ್ದಳು. ಆಗ ಎದುಸಿರು ಬಿಡುತ್ತಾ ಬ೦ದ ಸಿಟಿ ಬಸ್ಸಿನೆಡೆಗೆ ಅಲ್ಲಿದ್ದವರ ದೃಷ್ಟಿಹಾರಿತು. ಬಸ್ಸಿನೂಳಗೆ ಹೆಚ್ಚುಕಮ್ಮಿ ಕುರಿ ಮ೦ದೆಯ೦ತೆ ನುಗ್ಗತೂಡಗಿದರು. ಇನ್ನೇನು ಬಸ್ಸು ಹೂರಡಬೇಕ್ಕೆನುವಷ್ಟ್ಟರಲ್ಲಿ ಅದೇ ಯುವತಿ ಯಾರಾದರೂ ಸ್ವಲ್ಲಪ್ಪ ಹೆಲ್ಪ್ ಮಾಡ್ತಿರ ಎ೦ದು ಅ೦ಗಲಾಚುತಿದ್ದ ಆ ಕುರುಡಿಯ ದ್ವನಿ ಬಸ್ಸಿನ ಎದುಸಿರಿನೊಡನೆ ಮರೆಯಯಿತೋ, ಬೇರೆತುಹೊಹಿತೋ......
ಚಿತ್ರ ೩
ಒ೦ದು ಅ೦ಗುಲ ನೆಲವಿಲ್ಲದ, ನೆಲೆ ನಿಲ್ಲಲು ಸೂರಿಲ್ಲದ, ವಯಸ್ಸಾದ ಅಪ್ಪ ಅಮ್ಮ ದುಡಿಯಲು ಕಸುವಿದ್ದರೂ ಕೆಲಸವಿಲ್ಲದ ತಮ್ಮ, ಮದುವೆಗೆ ಬ೦ದು ನಿ೦ತ ತ೦ಗಿಯರು, ಮತ್ತು ತನ್ನ ಬದುಕಿ೦ಗೊ೦ದು ದಾರಿ ತೋರಿದ ವೀರಯ್ಯ ಮೇಸ್ಟ್ರುಗಳು ಬೆ೦ಗಳೂರಿನ ವಿಮಾನ ನಿಲ್ದಾಣದಲ್ಲಿ Dr. ಸುರೇಶ್ ರನ್ನು ಬಿಳ್ಕೊಡಲು ಬ೦ದಿದ್ದರು. ಇನ್ನೇನು ಸಮಯವಿಲ್ಲದೆ ಒಳಗೂಗಲೇ ಬೇಕಾದ ಅನಿವಾರ್ಯತೆ ಆಗ ಸುರೇಶ ತನ್ನ ಮುದ್ದು ಮಡದಿ, ಬ೦ದು ಬಳಗ ಸ್ನೇಹಿತರು ಎಲ್ಲರನೋಮ್ಮೆ ಕ೦ಣ್ ತೊ೦ಬಿಕೊ೦ಡು ತನ್ನ ಮಗುವನ್ನ ಬಾಚಿ ತಬ್ಬಿ ಮೈದಡವಿ ಮುತ್ತನಿತ್ತು ಬಿಟ್ಟ ಕಣ್ಣುಗಳಿ೦ದ ಹಾಗೆಯೇ ದಿಟ್ಟಿಸುತ್ತಾ ಮೊಡಗಳಲ್ಲಿ ಮಾರೆಯಾದ.....