ಮಲಗುವ ಸಮಯದಲ್ಲೂ ಮೊಬೈಲ್ ಬೇಕೇ?

ಮಲಗುವ ಸಮಯದಲ್ಲೂ ಮೊಬೈಲ್ ಬೇಕೇ?

ಕೆಲವರಿಗೆ ಮೊಬೈಲ್ ಎಂಬ ಸಾಧನ ಇಲ್ಲದೆ ಈಗ ಯಾವ ಕೆಲಸವೂ ಆಗುವುದಿಲ್ಲ, ಸಮಯವೂ ಹೋಗುವುದಿಲ್ಲ. ಕೆಲವರಿಗಂತೂ ಸಮಯವನ್ನು ಕೊಲ್ಲಲು ಇರುವ ಸುಲಭ ಸಾಧನ ಈ ಮೊಬೈಲ್. ಇದರಿಂದ ಹಣ ಕಳೆದುಕೊಳ್ಳುವ, ಮೋಸ ಹೋಗುವ, ಹನಿ ಟ್ರ್ಯಾಪ್ ಗೆ ಒಳಗಾಗುವ ಜನಗಳಿಗೂ ಕಡಿಮೆ ಇಲ್ಲ. ಬಹಳಷ್ಟು ಜನ ಮೊಬೈಲ್ ಅನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ರಾತ್ರಿ ನಿದ್ರೆಗೆ ಜಾರುವ ಸಮಯದಲ್ಲೂ ಮೊಬೈಲ್ ಪಕ್ಕದಲ್ಲೇ ಇರಬೇಕು. ಹಾಸಿಗೆಯ ಬದಿಯಲ್ಲೇ ಚಾರ್ಜ್ ಗೆ ಹಾಕಿ ಮಲಗಿಕೊಳ್ಳುವವರೂ ಇದ್ದಾರೆ. ಇದೆಲ್ಲಾ ಕೆಟ್ಟ ಅಭ್ಯಾಸಗಳು. ಕೆಲವೊಮ್ಮೆ ಜೀವ ತೆಗೆಯುವ ಪ್ರಾಣಾಂತಿಕ ಘಟನೆಗಳೂ ನಡೆಯುವ ಸಂಭವ ಇರುತ್ತದೆ.

ಈ ಮೊಬೈಲ್ ನ ಅತಿಯಾದ ಬಳಕೆಯಿಂದ ಮೆದುಳಿಗೆ ಹಾನಿಯಾಗುವುದಲ್ಲದೆ ದೇಹದ ಇತರ ಭಾಗಗಳಿಗೂ ತೊಂದರೆಯಾಗುತ್ತದೆ. ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿ ಅದರ ಪಕ್ಕದಲ್ಲೇ ಮಲಗುವುದರಿಂದ ಆರೋಗ್ಯ ಸಮಸ್ಯೆ ತಲೆದೋರುತ್ತದೆ. ಮೊಬೈಲ್ ನಿಂದ ಹೊರಹೊಮ್ಮುವ ವಿಕಿರಣವು ಸಂತಾನೋತ್ಪತ್ತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಹಲವಾರು ವರದಿಗಳು ಹೇಳುತ್ತಿವೆ. ಇದು ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಭವಿಷ್ಯದಲ್ಲಿ ತಂದೆಯಾಗಲು ಸಮಸ್ಯೆಯಾಗಬಹುದು. ಹಾಸಿಗೆಯ ಮೇಲೆ, ದಿಂಬಿನ ಕೆಳಗೆ ಮೊಬೈಲ್ ಇಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆ. ಸಣ್ಣ ಮಕ್ಕಳು ಈ ರೀತಿಯಾಗಿ ಮಲಗುವಾಗಲೂ ಮೊಬೈಲ್ ಬಳಸಿದರೆ ಇನ್ನೂ ಹೆಚ್ಚಿನ ಸಮಸ್ಯೆಯಾಗುತ್ತದೆ. ಏಕೆಂದರೆ ಅವರ ತಲೆ ಬುರುಡೆಯು ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ. ಮೊಬೈಲ್ ನಿಂದ ಹೊರಹೊಮ್ಮುವ ವಿಕಿರಣವು ಕ್ಯಾನ್ಸರ್ ಮತ್ತು ಟ್ಯೂಮರ್ (ಗೆಡ್ಡೆ) ಸಮಸ್ಯೆಗಳು ಉದ್ಭವವಾಗಲು ಕಾರಣವಾಗುತ್ತವೆ. ಈ ಕಾರಣಕ್ಕೇ ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು. 

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮೊಬೈಲ್ ಅನ್ನು ಹಾಸಿಗೆಯ ಬಳಿ ಚಾರ್ಜ್ ಗೆ ಇಟ್ಟು ಮಲಗಿದಾಗ ಅದರ ರೇಡಿಯೋ ಆವರ್ತನವು ನಿರಂತರವಾಗಿ ಹೊರಹೊಮ್ಮುತ್ತಿರುತ್ತವೆ. ಇದು ನಮ್ಮ ಚಯಾಪಚಯ ಕಾರ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ರಾತ್ರಿ ಮಲಗುವಾಗ ಸುರಕ್ಷಿತ ದೂರದಲ್ಲಿ ಮೊಬೈಲ್ ಅನ್ನು ತೆಗೆದಿಡಿ. ಸುಮಾರು ಮೂರು ಅಡಿ ದೂರದಲ್ಲಿಟ್ಟು ಮಲಗುವುದರಿಂದ ಮೊಬೈಲ್ ನಿಂದ ಆಗುವ ಕೆಟ್ಟ ಪರಿಣಾಮಗಳನ್ನು ತಕ್ಕ ಮಟ್ತಿಗೆ ನಿಯಂತ್ರಿಸಬಹುದಾಗಿದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ