ಮಲೆನಾಡ ಮೋಡಿ

ಮಲೆನಾಡ ಮೋಡಿ

ಕವನ

ಮಲೆನಾಡ ಮೋಡಿ



ಹಸಿರು ತೋರಣದಂತೆ |
ಕುಸುರಿ ಕೈಯಾರೆ ಮಾಡಿ |
ದಂಥಾ ನಮ್ಮೂರು ಮಲೆನಾಡು ||
ಅಂಥಾ ನಮ್ಮೂರು ಮಲೆನಾಡ ನೋಡ ಬನ್ನಿ |
ಘಟ್ಟವು ಚೆಲುವಿನ ನೆಲೆವೀಡು ||ಪ||


ಎಂತೆಂಥ ಪರ್ವತ |
ಅಲ್ಲಿಂದ ನದಿಗಳು |
ಹರಿದಂಥ ಚೆಂದವ ಬಂದು ನೋಡಿ ||
ಹರಿವಾಗ ರಭಸದ ಜಲಪಾತಗಳ ನೋಡಿ |
ದಾರಿ ಇಕ್ಕೆಲದ ಝರಿ ಮೋಡಿ ||೧||


ತೆಂಗು ಕಂಗಿನ ತೋಟ |
ಕಬ್ಬು ಭತ್ತದ ನೋಟ |
ಸುತ್ತ ಮುತ್ತಿರುವ ಸಿರಿ ನೋಟ ||
ಸುತ್ತ ಹಾಸಿರುವಂತ ಹಸಿರು ಗಾಧಿಯ ಮೇಲೆ |
ಉಲ್ಲಾಸವೇ ಮನದುಯ್ಯಾಲೇ ||೨||


ಎಷ್ಟು ಹೇಳುವುದೇನು |
ಕಷ್ಟ ಬಿಡದ ಜನ |
ಇಷ್ಟಪಟ್ಟಿದನು ಕಾದಿಹರು ||
ಇಷ್ಟ ಅನಿಷ್ಟದ ಕಾಲದೋಟದ ಒಳಗು |
ಇಟ್ಟುಕೊಂಡಿರುವ ಪರಿ ಬೆರಗು ||೩||

 
                                                                     -    ಸದಾನಂದ

Comments