ಮಲ್ಪೆಯಲ್ಲಿ ನಾವು ಮಾಡಿದ ದರ್ಶನ, ಬಲರಾಮದೇವರದು !

ಬರಹ

ಶ್ರೀ ಮಧ್ವಾಚಾರ್ಯರು, ಉಡುಪಿಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದಂತೆಯೇ, ಮಲ್ಪೆಯಲ್ಲೂ ಬಲರಾಮದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದಾರ‍ೆ. ಶ್ರೀಗಳವರ ಕರಕಮಲಗಳಿಂದ ಸ್ಥಾಪಿಸಲ್ಪಟ್ಟ ಈ ಮೂರ್ತಿಯನ್ನು ಸ್ಥಳೀಯರು 'ವಡಬಾಂಡೇಶ್ವರ ಸ್ವಾಮಿ 'ಯೆಂದು ಕರೆಯುತ್ತಾರೆ. ಇದು ತುಳು ಭಾಷೆಯಿಂದ ಬಂದ ಪದವೆಂದು  ಕೆಲವರು ಹೇಳಿದರು.
ನಾವು ಅಲ್ಲಿಗೆ ಹೋದಾಗ, ಅಪರಾನ್ಹ ಮೂರುಗಂಟೆಯಮೇಲಾಗಿತ್ತು. ಮೇಲಾಗಿ ನಮಗೆ ಮುಂದೆ ಮುರುಡೇಶ್ವರಕ್ಕೆ ಹೋಗಲಿಕ್ಕಿತ್ತು. ದೇವಾಲಯ ಮತ್ತೆ ತೆರೆಯಲು ಸಮಯವಿತ್ತು. (೪ ಗಂಟೆಗೆ), ಅದಕ್ಕೆ ಅರ್ಚಕ ಐತಾಳರು, ತಮ್ಮ ಖಾಸಗಿ ಕೆಲಸಕ್ಕೆ ಊರಿನಕಡೆ ಹೋಗಿದ್ದರು. ಸೈಕಲ್ ಮೇಲೆ ಕುಳಿತು ಬಂದರು. ನಮ್ಮ ಗಡಿಬಿಡಿ ಕಂಡು ಸಹಕರಿಸಿ ಮಂಗಳಾರತಿ ಮಾಡಿ ಪ್ರಸಾದ ಕೊಟ್ಟರು. ದೊಡ್ಡ ಪ್ರಾಕಾರವನ್ನು ಹೊಂದಿದ ಈ ದೇವಾಲಯದ ಬದಿಯಲ್ಲೂ ಕೆಲವು ದೇವರ ಗುಡಿಗಳಿವೆ.  ಬಹುಶಃ ಬಲರಾಮದೇವರ ಗುಡಿ ನಾನು ಕಂಡಂತೆ, ಹೆಚ್ಚಿಗೆ ಇಲ್ಲವೇನೋ ಅನ್ನಿಸುತ್ತೆ !