ಮಲ್ಲಿಗೆ ತಂದ ನೆನಪು

ಮಲ್ಲಿಗೆ ತಂದ ನೆನಪು

ಕವನ

ಮುಡಿದ ಮಲ್ಲಿಗೆ ಹಾಗೆ ಮೆಲ್ಲಗೆ

ನಿನ್ನ ನೆನಪನು ತಂದಿತು

ಎಣೆದ ಮುಡಿಯದು ಅಂದಚೆಂದದಿ

ರೂಪರಾಶಿಯ ಹೊದ್ದಿತು||

 

ಕಣ್ಣ ಕೊಳದಲಿ ಇನಿಯ ತೇಲಿದ

ಬಿಂಬ ಮುಕುರದಿ ಕಂಡಿತು

ಸಣ್ಣಹೃದಯವು ದೊಡ್ಡ ಕನಸನು

ಹಾಡು ಹಗಲಲೆ ಕಂಡಿತು||

 

ಹೂವು ಹಾಸಿಗೆ ಚೆಂದ್ರ

ಚುಂಬನ

ಪುಟ್ಟ ಹೃದಯವು ಬಯಸಿತು

ಮಾವು ಫಲಿಯಲು ಗಿಣಿಯು ಕಚ್ಚುವ

ದೃಶ್ಯ ಕಂಗಳು ನೆನೆಯಿತು||

 

ಹೂವ ಬನದಲಿ ಅರಳೊ ಸಮಯದಿ

ಭೃಂಗ ಬರುವುದು ಮೆಲ್ಲಗೆ

ಮಾವ ತನುವನು ಬಳಸಿ ನಿಲ್ಲಲು

ಮಧುರ ಸ್ಪರ್ಶವು ನಲ್ಲೆಗೆ||

 

ಕನ್ಯೆಕಂಡಿಹ ಮಧುರ ಕನಸದು

ನನಸು ಆಗಲು ತಣಿದಳು

ಶೂನ್ಯಜಗವಿದು ಇನಿಯ ಬರದಿರೆ

ವಿರಹ ಪಂಜರ ಎಂದಳು||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್