ಮಳೆಗಾಲದಲ್ಲಿ ಹಳ್ಳಿಯಲ್ಲಿ...
ಕವನ
ಉಪ್ಪಿನ ಅಳೆತೆಯು ತಪ್ಪಿದೆ ಖಾದ್ಯಕೆ
ಸಪ್ಪೆಯೆ ಎನಿಸುವ ಸಾಂಬಾರು
ತಪ್ಪನು ನೆನೆಯದೆ ಒಪ್ಪದಿ ಉಣ್ಣಲು
ಹಪ್ಪಳ ಸಂಡಿಗೆ ಹುರುದುಬಿಡು
ಉಪ್ಪಿನ ಕಾಯಿಯೊ ಸೊಪ್ಪಿನ ಸಾರಲಿ
ಒಪ್ಪದು ಮನವಿದು ಉಣ್ಣಲಿಕೆ
ತುಪ್ಪವ ಸುರಿದರೆ ಸಪ್ಪೆಯು ಕಳೆವುದೆ
ಚಪ್ಪರಿಸುಣ್ಣಲು ಬೇಕದಕೆ
ಸುರಿಯುವ ಮಳೆಯಿದೆ ಹೊರಗಡೆ ಹೋಗದೆ
ಕಿರಿಕಿರಿಯಾಗಿದೆ ಮನದೊಳಗೆ
ಗರಿಗರಿಯಾಗಿಹ ಕರಿದಿಹ ತಿಂಡಿಯ
ಮುರಿಯುತ ತಿನ್ನುವ ಮನವಿಹುದೆ
ಅಕ್ಕರೆಯಿಂದಲಿ ಸಕ್ಕರೆ ಬೆರೆಸಿದ
ಚೊಕ್ಕದ ಪಾಯಸ ನೀ ಮಾಡು
ಮಿಕ್ಕಿದೆಯಾದರೆ ಇಕ್ಕುವುದಿರುಳಿಗೆ
ಪಕ್ಕದೆ ಕೂರುತ ಜೊತೆಗೂಡು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
