ಮಳೆಯಲ್ಲಿ ಕಣ್ಣೀರು ಕಾಣಿಸುವುದಿಲ್ಲವೆಂಬ ನಂಬಿಕೆ
ಬರಹ
ಮನದ ಮುಗಿಲಿನ ಕಾರ್ಮೋಡ ಸರಿಯಲು..
ಆಗಸದಲ್ಲಿ ಮೂಡಬೇಕು ಅವೇ ಕಾರ್ಮೋಡಗಳು...
ನಿನ್ನ ನೋವು ಕಂಡ ಬಾನು ಕೂಡ...
ಸುರಿಸಿತು ತನ್ನೊಡಲಿಂದ ಕಣ್ಣೀರ ಧಾರೆ ಭೋರ್ಗರೆಯುತ..
ಯುವ ಪ್ರೇಮಿಗಳಿಗೆ ನೀನಾದೆ ಪನ್ನೀರ ಸಿಂಚನ...
ಭಗ್ನ ಪ್ರೇಮಿಗೆ ಹೇಳುವೆ ನೀ ತಣ್ಣನೆ ಸಾಂತ್ವಾನ...
ನೀ ಬಂದಾಗಲೆಲ್ಲ ತನ್ನ ಪ್ರೇಮಿಯ ನೆನೆಯುವ ಪ್ರೇಮಿ
ಮಳೆಯ ನೀರ ಜೊತೆ ಕಣ್ಣೀರ ಸುರಿಸುವ...
ಏಕೆಂದರೆ ಮಳೆಯಲ್ಲಿ ಕಣ್ಣೀರು ಕಾಣಿಸುವುದಿಲ್ಲವೆಂಬ ನಂಬಿಕೆ
ತುಂತುರು ಹನಿಯಾಗಿ, ಸ್ವಾತಿ ಮುತ್ತಾಗಿ, ಕುಂಭದ್ರೋಣವಾಗಿ ಬಂದೆ ನೀನು...
ಎಲ್ಲವನ್ನು ಕೊಚ್ಚಿಕೊಂಡು ಹೋಗುವ ನೀನು...
ನನ್ನ ಮನದಾಳದ ನೋವನ್ನು ಹೊತ್ತೊಯ್ಯಲಾರೆಯ??