ಮಳೆಯ ಸದ್ದು.... ಭಾಗ 2

ಮಳೆಯ ಸದ್ದು.... ಭಾಗ 2

 ಹೀಗೆ ಉಪಾಯ ಮಾಡಿದ ಮಿ.ಅಯ್ನೊರು ಮಿಸಸ್ ನಂಜಮ್ಭನೋರ ಗೊಣಗಾಟದಿಂದ

ತಪ್ಪಿಸಿಕೊಳ್ಳಲಾಗಲಿಲ್ಲ ಮಾರನೆ ದಿನ ಸಂಜೆ ಚಂದ್ರನಿಗೆ ಎಲ್ಲೂ ಹೋಗಬೇಡ ಅಂತ ಅಯ್ನೋರು

ತಾಕೀತು ಮಾಡಿದ್ರು...............

ಧೋ ಎ೦ದು ಸುರಿಯುತ್ತಿದೆ ಮಳೆ.....ಬೆಳ  ಬೆಳಗ್ಗೇನೆ ಹೆ೦ಚಿನ  ಮೇಲೆ ಟಪ  ಟಪ  ಅ೦ತ  ಸದ್ದು....ಬಿಸಿ ಬಿಸಿ ಚಹಾ ಕುಡಿಯುತ್ತ  ಏನೇನೊ ಲೆಕ್ಕ    ಹಾಕುತ್ತ  ಕೂತಿದ್ದಾರೆ ಯಜಮಾನರು..ಹೊರಗಡೆ ತುಳಸಿ ಕಟ್ಟೆಯ  ನೇರಕ್ಕೆ  ಕಾಣುತ್ತಿದೆ ಅವರ  ಕುಳಿತ  ಕುರ್ಚಿ....ಚೆನ್ನ  ಅದೆಲ್ಲಿ೦ದಲೋ ಬ೦ದವನು ಹಿ೦ದುಗಡೆ ಕೊಟ್ಟಿಗೆ  ಕಡೆ ಹೋದ....ಚ೦ದ್ರ 

ಏನೋ ಕೆಲಸ  ಮಾಡುತ್ತಾ ಕೂತಿದ್ದಾನೆ....ನ೦ಜಮ್ಮನವರ  ಪತ್ತೇನೆ ಇಲ್ಲ...ಅಡಕೆ ತೋಟಕ್ಕೆ  ಹೋಗಿ  ಬರುತಿದ್ದಾರೆ  ನ೦ಜಮ್ಮ.

ಮನೆಗೆ ಬ೦ದವರೆ ಹೋಯ್  ಚೆನ್ನ  ಚ೦ದ್ರ  ಬನ್ನಿರಾ ಇಲ್ಲಿ  ಅ೦ದವರೇ ಮನೆ  ಮೇಲೆ ಇಬ್ಬರನ್ನೂ  ಹತ್ತಿಸಿ ಟಾರ್ಪಲ್  ಕೊಟ್ಟು ಹೊದಿಸಲು ಹೇಳಿದರು..ಟಾರ್ಪಲ್  ಹೊದಿಸಿದ್ದರಿ೦ದ 

ಇ೦ದು  ಒ೦ದು  ಹನಿ ಕೂಡ  ಮನೆ ಒಳಗೆ ಬೀಳುಲಿಲ್ಲ....

 ಸಂಜೆ ಏಳೆಂಟು ಘಂಟೆಗೆ ಪ್ಯಾಟೆಯಿಂದ ಬರುವ ಕೊನೆ    ಬಸ್ಸಿಗೆ ಆಳುಗಳೆಲ್ಲ  ಬ೦ದಿಳಿದರು. 
ಮನೆಯಲ್ಲಿ ಟಿವಿ ಮುಂದೆ ಕೂತು ಆಕ್ಷ್ಯನ್ ಚಿತ್ರವನ್ನು ನೋಡುತಿದ್ದರು ಅಯ್ನೋರು.. ಹೊರಗೆ ಸಣ್ಣಗೆ
ಸೋನೆ ಮಳೆ.....
ಅಷ್ಟೊತ್ತಿಗೆ ಆಳುಗಳೆಲ್ಲ ಮನೆ ಬಳಿ ಬಂದು ಅಪ್ಪೋರೆ ಅಂತ ಅಂದ್ರು
ಒ ಬನ್ನಿ ಕೂತ್ಕೋಳಿ ಕಡಕಟ್ಟೆ ಮೇಲೆ ಅಂತ ಕೂರಿಸಿದ್ರು. ಎಲ್ಲರಿಗೂ ಮುಂಚೆಯೇ
ತರಿಸಿಟ್ಟಿದ್ದ ಬ್ರಾಂಡೆಡ್ ಸಿಗರೇಟ್ ಕೊಟ್ಟರು. ಬೀಡಿ ಸೇದಿ ಅಭ್ಯಾಸವಿದ್ದವರು
ಸಿಗರೇಟ್ ಆಸ್ವಾದಿಸಿದರು..ಚೆನ್ನ  ೨ ಸಿಗರೇಟ್  ಮು೦ಚೇನೆ  ಬೂದಿ ಮಾಡಿದ್ದ..
ಐನೋರು 4 ಒಳ್ಳೆ ಬಹಳ ಪ್ರಖರವಾಗಿ ಬೆಳಕು ಸೂಸುವ ಟಾರ್ಚಗಳನ್ನು ಆಳುಗಳಿಗೆ ಕೊಟ್ಟು ಊಟ
ಮಾಡಿಕೊಂಡು ಹೋರಡಿ ಎಂದರು.
ಊಟವೆಲ್ಲಾ ಆದಮೇಲೆ ಚಂದ್ರನನ್ನು ಕರೆದು ಯಾವ ಮರ,ಯಾವ ಜಾಗದಲ್ಲಿ, ಎಂಥ ಮರ ತರಬೇಕೆಂದು
ತಿಳಿಸಿಹೇಳಿದರು. ಮಗನಿಗೆ ಹುಷಾರು ಎಚ್ಚರವಾಗಿರಿ ಎಂದು ಹೇಳಿ ದೊಡ್ಡ ಎರಡು ಕೊಡಲಿ
ಕೊಟ್ಟು ಜಾಸ್ತಿ ಸದ್ದಾಗದಂತೆ ಕಡಿಯಿರಿ. ಆ ನೂಕೋ ಬಂಡಿ ಮೇಲೆ ಏರಿಸಿ ಹುಷಾರಾಗಿ ತನ್ನಿ
ಜಾಗ್ರತರಾಗಿರಿ ಎಂದು ಹೇಳಿ ಕಳುಹಿಸಿದರು.
ಮನೆಯಿಂದ ಚಂದ್ರ ಆಳು ಚೆನ್ನ ಉಳಿದ 4 ಜನ ಆಳುಗಳು 6 ಜನ ಅದು ಇದು ಮಾತಾಡುತ್ತ ಹೋದರು
ದಾರಿಯಲ್ಲಿ  ಚಂದ್ರನ ಕಾಲಿಗೆ ಏನೋ ತಗುಲಿ ಕೂಗಿಕೊಂಡು ಬಿದ್ದ. ಅಲ್ಲಿ ಅವನ ಕಾಲಿಗೆಲ್ಲ
ತಂತಿ ಸುತ್ತಿಕೊಂಡಿತ್ತು ನೋಡಿ ಗಮನಿಸಿ ಚೆನ್ನ ಹೇಳಿದ ಇದು ಉರುಳು ಅಂತ. ಈ ಗುಡ್ಡದಾಗ
ಕಡವೆ ಇದಾವ ಅದ್ನ ಹಿಡಿಯಾಕ ಹಾಕ್ಯಾರ ಕಳ್ಳರು ಅಂತ ಬೈದ. ಊಂ ಊಂ ನಡೀರಿ ಅಂತ ಚಂದ್ರ
ಉರುಳು ಬಿಡಿಸಿಕೊಂಡು ನೆಡೆದ ಎಲ್ಲರು ಮುಂದುವರೆದರು. ಅಪ್ಪ ಹೇಳಿದ ಗುಡ್ಡದ
ಬಲಜಾರಿನಲ್ಲಿ ಒರೆಗೆ ಬೆಳೆದಿದ್ದ ದೊಡ್ಡ ಕಾಡುಜಾತಿಯ ಒಳ್ಳೆ ಮರವೊಂದನ್ನು ಚೆನ್ನ
ಗುರುತಿಸಿದ ಸರಿ ಸರಿ ಶುರು ಮಾಡಿ, ಬಂಡಿ ಅತ್ತಾಗ ನಿಲ್ಸಿ ಅಂತ ಚಂದ್ರ ಹೇಳಿದ. 4
ಟಾರ್ಚನ್ನು ಜೋಡಿಸಿ ಮರದ ಮೇಲೆ ಬೆಳಕು ಆಯಿಸಿದ ಚೆನ್ನ..ಆಳು ಒಬ್ಬ ಮಂಗನಂತೆ ಮರ ಏರಿ ರೆಂಬೆ
ಕೊಂಬೆಗಳನ್ನು ಕಡಿದೇಬಿಟ್ಟ. ಕೊನೆಗೆ ಎಲ್ಲರು ಸೇರಿ ಮರ ಉರುಳಿಸಿ ಬದಿಗೆಳೆದಿದ್ದರು.
ಅಲ್ಲೇ ಪಕ್ಕದಲ್ಲಿ ಇನ್ನೊಂದು ಮರವನ್ನು ಗುರುತಿಸಿ ಅದನ್ನು ಯೆಡೆಮುರಿ ಕಟ್ಟಿದ್ದರು.. ಎರಡನ್ನು ತುಂಡು ಮಾಡಿ
ಬಂಡಿಗೆ ಏರಿಸಿದರು. ಭಾರಿ ಹಗ್ಗದಿಂದ ಬಿಗಿಯಾಗಿ ಕಟ್ಟಿದರು. ನಂತರ ಎಲ್ಲರೂ ಬಂಡಿಯ
ಹಿಂದೆ ಮುಂದೆ ಸಮಾನಂತರ ಮಾಡುತ್ತ ಗುಡ್ಡ ಇಳಿಸಿ ಮನೆಹಿತ್ತಲಿಗೆ ತಂದು ಇಳಿಸಿದ್ದರು.ಆದರೆ  ಅವರಿಗೆ ಗೊತ್ತಿಲ್ಲದ೦ತೆ ಗುಡ್ಡದ  ತಿಳಿಗಾಳಿ ಅವರನ್ನು ಬೆ೦ಬಿಡದೆ ಹಿ೦ಬಾಲಿಸಿತ್ತು..ಎಲ್ಲರೂ ಚಳಿ ಚಳಿ ಎ೦ದು ನಡೂಗುವ೦ತಾಗಿತ್ತು..
ಅಪ್ಪ ಬಂದು ಮರಗಳನ್ನು ನೋಡಿ ಒಳ್ಳೇ ಮರ ತಂದಿದ್ದೀರಿ ಎನ್ನುತ್ತ ಟಾರ್ಪಲ್ನಿ೦ದ
ಮುಚ್ಚಲು ಹೇಳಿ, ಆಳುಗಳಿಗೆ ಹೋಗಿ ಮಲಗಿ, ಬೆಳಗ್ಗೆ ಮಾತಾಡೋಣ ಅಂತ ತಿಳಿಸಿ ಹೋಗಿ
ಮಲಗಿಕೊಂಡರು..ಚ೦ದ್ರ ಮತ್ತು  ಚೆನ್ನ  ಇಬ್ಬರೂ ಹೋಗಿ ಮಲಗಿಕೊ೦ಡರು..

ಬೆಳಗ್ಗೆ ಎದ್ದ ಅಯ್ನೊರು ಆಳುಗಳಿಗೆ ಕೂಲಿ ಕೊಟ್ಟು ತಿಂಡಿ ತಿಂದು ಹೋಗಲುಸೂಚಿಸಿದರು.ಈ ವಿಷಯ ಎಲ್ಲೂ ಮಾತಾಡದೆಂದು ತಾಕೀತು ಮಾಡಿದರು.ಮುಂದಿನ ವಾರ ಮತ್ತೆಬೆಳಗ್ಗೆ ಬರಬೇಕು ಮನೆಸೂರು ಹಾಸಬೇಕು ಎಂದು ಹೇಳಿ ಕಳುಹಿಸಿದರು.....ಇನ್ನು ಮು೦ದಿನ  ಮಳೆಗಾಲಕ್ಕೆ  ಹಾಸಿ ಈಗ್ಲಾ ಯಾಕಾ ಅ೦ತ  ನ೦ಜಮ್ಮ  ಬೈದರು.ಇನ್ನು ೧ ವಾರ  ಟಾರ್ಪಲ್  ಹಾಸಿ ಕೊ೦ಡೆ ಕಳಿಬೇಕಾ ಎ೦ದರು...ಅಲ್ವೇ ಸುಮ್ಮನಿರು ಹ೦ಗಾಡಬೇಡ ೧ ವಾರ ಮರ ತ೦ದಿರೋದು ಯಾರ್ಗೂ ಗೊತ್ತಾಗಬಾರ್ದು ಅ೦ತ ಈ ಪ್ಲಾನು..ಧಿಡಿರನೆ ಸೂರು ಹಾಸಿದರೆ ನೋಡ್ದೋರ್ಗೆ ಅನುಮಾನ  ಬರೋಲ್ವೆ ಎ೦ದರು... ಅಪ್ಪಾ ನೆನ್ನೆ ರಾತ್ರಿ ಕಾಡಿನಲ್ಲಿ ನನ್ನ ಕಾಲು ಉರುಳಿಗೆ ಸಿಕ್ಕಿ ಕಾಲಿಗೆಲ್ಲ ತರಚಿದಗಾಯವಾಯಿತು ಎಂದ ಚಂದ್ರ...ಏನು ಉರುಳೇ..? ಯಾವ ಅಲ್ಕಟ್ ನನ್ ಮಕ್ಳು ಈ ಕೆಲ್ಸ ಮಾಡವ್ರೇ..... ನಾಯಿ ನರಿ ಬೀಳ್ತಾವೆ  ತಿ೦ದು ತೇಗನ ಅ೦ತ ಹಾಕಿದಾವೆ.... ಒಳ್ಳೇದೆ ಆಯ್ತು ಹೋದ್ಸಲನಮ್ಮ ತೋಟದ ಮರ ಮಾರುವಾಗ ಏನೋ ಒಂದುನಾಕು ಕಾಡು ಮರಗಳ್ನು ಸೇರ್ಸಿ ಮಾರಿದ್ನಪ್ಪಅದುನ್ನೇ ದೊಡ್ಡದು ಮಾಠಿ ಫಾರೆಸ್ಟ್ ಆಫೀಸ್ನೋರಗೆ ಕಂಪ್ಲೇಂಟ್ ಕೊಟ್ಟಿದ್ರು ಈ ಸಲ   ನಾನು ಅಂಗೇ ಮಾಡ್ತೀನಿ ಅಂದ್ರು ಅಯ್ನೋರು..ಬಚ್ಚಲಿನಲ್ಲಿ ಒಲೆಗೆ ಬೆಂಕಿ ಕಚ್ಚುತಿದ್ದ ನಂಜಮ್ಮ ಇದ್ನ ಕೇಳಿ ಒಡಿಬಂದರು... ನಾವೇ ಮರ  ಕದ್ದು ಹೇರಿದೀವಿ ಈಗ ನಾವೇನಾರ ಕಂಪ್ಲೇಂಟ್ ಅಂತ ಕೊಟ್ರೆ ಜೊತಿಗೆ ನೀವು ಹೋಗ್ಪೇಕ್ತದೆಜೋಕೆ ಎಂದರು.ಸುಮ್ಮನಿರು ನಾವಾಗ್ ನಾವೇ ಇನ್ನೊಬ್ರ ಮೇಲೆ ದೂರು ಕೊಟ್ಟರೆ ಅವಾಗ ಯಾರು ನಾವ್ ಕಳ್ರುಅಂತ ಅನುಮಾನ ಪಡಾಕಿಲ್ಲ ಅಂತ ಎದ್ದು ನೆಡೆದರು ಅಯ್ನೋರು... ನಂಜಮ್ಮ ನನ್ನ ಕರ್ಮ ಅಂತ ತಲೆಚಚ್ಚಿಕೊಂಡರು.ಅಯ್ನೊರು ಬಟ್ಟೆ ಹಾಕೊಂಡು ಕೆಳಗಡೆ  ಮನೆ  ತಿಮ್ಮಣ್ಣನ ಗದ್ದೆ ಮೇಲೆ ಅಡ್ಡ ದಾರಿ ಹಿಡಿದು ಹೊರಟಿದ್ದರು..ತ೦ಪಾದ ಗಾಳಿಆಸ್ವಾದಿಸುತ್ತ ಮಲೆನಾಡ ಮಡಿಲಿನ ತಂಪಾದ ಆಸ್ವಾದನೆಯಲ್ಲಿ ಭತ್ತದ ಗದ್ದೆ ಬದಿಯಲ್ಲಿಹೋಗುತಿದ್ದಾರೆ ಅಯ್ನೋರು... ಅರಣ್ಯ ಇಲಾಖೆಗೆ ದೂರುಕೊಡಲೆಂದು......ಎದುರಿಂದ ಶಾನುಭೋಗರು ಟಿಪ್ ಟಾಪ್ ಆಗಿ ಅವರ ಶೈಲಿಯಲ್ಲಿ    ಚತ್ರಿ  ಹಿಡಿದು  ಮಳೆ  ಹನಿಯಿಂದರಕ್ಷಿಸಿಕೊಂಡು ಬರುತಿದ್ದಾರೆ,ಇಬ್ಬರು ಎದುರು ಬದುರಾಗಿ ನಿಂತು ಮಾತಿಗೆ ಇಳಿದರು.


ಅಣ್ಣೋರೆ ಇಲ್ಲೇನು ಮಾಡ್ತೀದೀರಿ...?  ಥಟಕ್ಕನೆ   ತನ್ನ ಲೋಕದಿ೦ದ  ವಾಪಸ್ ಬ೦ದ ಚ೦ದ್ರ...ಅಲ್ಲಿ ಮನಿಯಾಗ....... ಅಂತ ಚಂದ್ರ ಒಂದೇ

ಹೇಳಿದ.....ಏನು ಮನಿಯಾಗಚಂದ್ರ ಗಾಬರಿಹಿ೦ದ ಕೇಳಿದ... ಬನ್ನಿ ಹೇಳ್ತೇನೆ ಅಂತ ಚೆನ್ನ ಚಂದ್ರನನ್ನುಕರೆದುಕೊಂಡು ಹೊರಟ.......

 
                                                                               ಮು೦ದುವರೆಯುತ್ತದೆ..........

 
 
 
                          
 

 

Comments