ಮಳೆ ಬಂತು ಮಳೆ
ಕವನ
ಮಳೆ ಬಂತು ಮಳೆ
ಮಳೆ ಬಂತು ಮಳೆ
ಭುವಿಯೊಳಗೆ ಚಿಮ್ಮಿತೊಂದು ಸೆಲೆ
ಜೀವ ರಾಶಿಗೆ ತಂತ್ತೊಂದು ನೆಲೆ
ಸಾಗರದಲಿ ಧುಮ್ಮಿಕ್ಕಿತೊಂದು ಅಲೆ
ಮಳೆ ಬಂತು ಮಳೆ
ಮಳೆ ಬಂತು ಮಳೆ
ಕೃಷಿಗೆ ತರುತಿದೆ ಮೆರಗು
ಕೇಳದೆ ಹಕ್ಕಿಗಳ ಗುನುಗು
ಗಿಡಗಳಲ್ಲಿ ಅರಳಿದೆ ಚಿಗುರು
ಮಳೆ ಬಂತು ಮಳೆ
ಮಳೆ ಬಂತು ಮಳೆ
ಮನದಲಿ ತುಂಬಿದೆ ನಲಿವು
ತಂಗಾಳಿಯು ತಂದಿದೆ ಒಲವು
ಆಸೆಗಳು ಮೂಡಿದೆ ಹಲವು
ಮಳೆ ಬಂತು ಮಳೆ
ಮಳೆ ಬಂತು ಮಳೆ
ಬೀಳುವ ಹನಿಗಳು ನೋಡಲು ಚೆಂದ
ಮನದಲಿ ಕಾಡಿದೆ ಹನಿಗಳ ಅಂದ
ಕಣ್ಣಲಿ ಮೂಡಿದೆ ಮುತ್ತಿನ ಬಿಂಬ
ಮಳೆ ಬಂತು ಮಳೆ
ಮಳೆ ಬಂತು ಮಳೆ
ರಾಗಾ
ಸ್ಪೂರ್ತಿ : ಕಠಿಣ ಕವಿ