ಮಳೆ ಬಂದಾಗ ಅವಳೂ ಬರುತ್ತಾಳೆ !

ಮಳೆ ಬಂದಾಗ ಅವಳೂ ಬರುತ್ತಾಳೆ !

ಕಿನ್ನರಿಯಂತೆ ಕಾಡೋ ಕಿನ್ನತೆ. ಮಳೆ ಬಂದಾಗ ಕಾಡುತ್ತದೆ. ಚಳಿ ಬಂದಾಗ ನೋವಿಸುತ್ತದೆ. ಮನದ ಮೂಲೆಯಲ್ಲಿ ಇದ್ದ -ಬದ್ದ ನೆನಪು ಆವರಿಸಿಕೊಳ್ಳುತ್ತವೆ. ಆಕೆಯ ನೆನಪು ನನ್ನ ಜೀವ ಹಿಂಡುತ್ತದೆ. ಅದು ಬದುಕಿನ  ಅರ್ಧ ಸತ್ತ ಸತ್ಯ ಆಗಿದೆ. ಕಿನ್ನತೆ ಮತ್ತೆ ಆವರಿಸಿಕೊಂಡಿದೆ. ಹೊರಡಗೆ ಮಳೆ ಸುರಿಯುತ್ತಿದೆ.
-------
ಮಳೆ ಸುರಿಯುತ್ತಿದೆ. ಹೊರೆಗಡೆ ಹೋಗಲು ಅಗುತ್ತಿಲ್ಲ. ಅವಳ ನೆನಪು ಕಾಡ್ತಿದೆ. ಮಳೆ ಮತ್ತು ಅವಳು ಜಂಟಿಯಾಗಿ ನನ್ನ ಹೃದಯದಲ್ಲಿದ್ದಾರೆ. ಅವಳು ಹೋದಾಗ ಮಳೆ ಹೋಗಿರುತ್ತದೆ. ಮಳೆ ಬಂದಾಗ ಅವಳು ಎದೆಯಲ್ಲಿ ತಾಜಾ ಹೂವಿನಂತೆ ಪರಿಮಳ ಬೀರುತ್ತಾಳೆ.

ಆಕೆ ನನ್ನವಳು ಅನ್ನೋದಕ್ಕಿಂತಲು. ‘ಅವಳು’ ಅಂದರೆ ಅಷ್ಟೇ ಸೂಕ್ತ. ಆಕೆಯ ಕಾಲ್ಗೆಜ್ಜೆಯ ಸದ್ದು. ಹೃದಯಲ್ಲಿ ಈಗಲೂ ಗಲ್..ಗಲ್ ಸದ್ದು ಮಾಡುತ್ತದೆ. ಅವಳಿಗೆ ಅದೇನ್ ಖುಷಿಯೋ ಏನೋ.
ನನ್ನನ್ನೆ ಕಾಡ್ತಿರೋದು. ಯಾಕೆ ಬಂದಳು. ಯಾಕೆ ಹೋದಳು. ಈ ಸತ್ಯ ನಾನು ಸತ್ತರೂ ನನಗೇನೆ ತಿಳಿಯೋದಿಲ್ಲ. ಆಕೆ ಅಜರಾಮರ. ಅವಳ ನೆನಪು ಅಮರ. ಅವಳು ಇರೋದೆ ಹಾಗೆ.  ಮನದ ಮನೆಯಲ್ಲಿ ಅಚ್ಚು ಮೂಡಿಸಿದ್ದಾಳೆ.

ಯಾಕೆ ಅನ್ನೋದು ಇನ್ನು ತಿಳಿದಿಲ್ಲ. ಅಕಾಲಿಕ ಮಳೆ ಬಂದರೆ ಮುಗೀತು. ಅವಳು ಇಡೀ ದೇಹವನ್ನೇ ಆವರಿಸಿಕೊಳ್ತಾಳೆ. ಮಳೆ ಬಾರದೇ ಇದ್ದರೇನೇ ಒಳ್ಳೆಯದ್ದು. ಅನ್ನೋಮಟ್ಟಿಗೆ ಆಕೆ ನನ್ನನ್ನು ಪೀಡಿಸುತ್ತಾಳೆ. ಕಾಡುತ್ತಾಳೆ.

ಆದರೆ, ಈಕೆ ಬಾರದೆ ಇದ್ದಾಗ ನನ್ನಲ್ಲಿ ನವೋಉಲ್ಲಾಸ. ಜೀವನ ಪ್ರೀತಿ ಹೆಚ್ಚಿರುತ್ತದೆ. ಬದುಕುವ ಆಸೆ ಏರುತ್ತಲೇ ಇರುತ್ತದೆ. ಆಕೆ ಬಂದಾಳು. ನನ್ನ ಕಾಡಿಯಾಳು ಅನ್ನೋ ಭಯ ಇರೋದಿಲ್ಲ. ಮೋಡ ಕವಿದ ವಾತಾವರಣ ಇದ್ದರೆ ಮುಗೀತು. ನನ್ನಲ್ಲಿ ತಳಮಳ ಹೆಚ್ಚು. ಇನ್ನು ಶುರು ಆಕೆಯ ಅಟ್ಟಹಾಸ. ಹೀಗೆ ನೂರು ಯೋಚನೆಗಳು. ನೂರು ನೆನಪುಗಳು ತಲೆ ಏರಲು ಕಾಯುತ್ತಿರುತ್ತವೆ. ಮಳೆ ಈಗ ಬಂದಾಗಿದೆ. ಆಕೆ ಬಿಟ್ಟು ಹೋಗಲು ಒಲ್ಲೆ ಅನ್ನುತ್ತಿದ್ದಾಳೆ. ಆಕೆ ಯಾರೂ ಅಂತ ಈಗಲೂ ನಿಮಲ್ಲಿ ಪ್ರಶ್ನೆ ಇದೆ ಅಲ್ಲವೆ. ಆಕೆ ಬೇರೆ ಯಾರು ಅಲ್ಲ. ನನ್ನವಳೇ.ನನ್ನ ನೆನಪುಗಳೆ. ಕಿನ್ನತೆ ಅಂತ ಮಾನಸಿಕ ತಜ್ಷರು ಕರೀತಾರೆ. ಮಳೆಗಾಲ ಮತ್ತು ಚಳಿಗಾಲ ಬಂದರೆ ಮುಗಿದೇ ಹೋಯ್ತು. ಆಕೆ ನನ್ನ ಆವರಿಸಿಕೊಂಡಿರುತ್ತಾಳೆ. ಈ ವಿಚಾರ ಬರೆಯೋವಾಗಲೂ ಆಕೆ ನನ್ನ ಆವರಿಸಿಕೊಂಡಿದ್ದಾಳೆ. ಹೋಗ ಲಕ್ಷಣ ಕಾಣ್ತಿಲ್ಲ.

-ರೇವನ್ ಪಿ.ಜೇವೂರ್​

Comments