ಮಳೆ
ಕವನ
ಏಕೆ ಸಿಟ್ಟು ಮಳೆ ರಾಯ ಧರೆಯ ಮೇಲೆ
ಉಳಿಯುವುದೇ ಪ್ರಾಣಿಗಳು ಭುವಿಯ ಮೇಲೆ
ದಯೆತೋರಿಸಿ ಬಾ ನೀನು ಇಳೆಯ ಮೇಲೆ
ಹಸಿರಾಗಿಸು ಒಮ್ಮೆ ನೆಲದ ಮೇಲೆ
ಬತ್ತಿ ಹೋಗುತಿವೆ ನದಿಗಳೆಲ್ಲಾ
ಮತ್ತೆ ಬಾಗುತಿವೆ ಮ಼ಗಗಳೆಲ್ಲಾ
ಮೆತ್ತಗಾಗುತಿವೆ ಸಸಿ ಗಳೆಲ್ಲಾ
ಅತ್ತು ಕರೆಯುತಿವೆ ಜೀವಿ ಗಳೆಲ್ಲಾ
ಹೊಸ ವರುಷ ಬಂದರೂ ಹರುಷವಿಲ್ಲ
ಕಸವೆ ತುಂಬಿದೆ ಬುವಿಯಲೆಲ್ಲಾ
ಹಸುನೀಗುತಿವೆ ದನಕರು ಗಳೆಲ್ಲಾ
ತುಸು ಮುನಿಸು ಮಾಡದೇ ನೀ ಬರಬೇಕಲ್ಲ
-ಕೆ. ವಾಣಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್