ಮಸಾಲಾ ಪಾಪಡ್

ಮಸಾಲಾ ಪಾಪಡ್

ಬೇಕಿರುವ ಸಾಮಗ್ರಿ

ಅಗಲವಾದ ಹಪ್ಪಳಗಳು - ೫, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಕತ್ತರಿಸಿದ ಟೊಮೆಟೋ - ಕಾಲು ಕಪ್, ಕತ್ತರಿಸಿದ ದಪ್ಪ ಮೆಣಸಿನ ಕಾಯಿ - ಕಾಲು ಕಪ್, ಕತ್ತರಿಸಿದ ಕ್ಯಾರೆಟ್ - ಕಾಲು ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೮ ತುಂಡುಗಳು, ಜೀರಿಗೆ ಹುಡಿ - ೨ ಚಮಚ, ಗರಮ್ ಮಸಾಲೆ ಹುಡಿ - ೧ ಚಮಚ, ಮೆಣಸಿನ ಹುಡಿ - ಅರ್ಧ ಚಮಚ, ಎಣ್ಣೆ - ೩ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಹಪ್ಪಳಗಳಿಗೆ ಸ್ವಲ್ಪ ಎಣ್ಣೆ ಸವರಿ ಕಾವಲಿಯ ಮೇಲೆ ಹಾಕಿ ತೆಗೆಯಿರಿ. ತಣಿದ ಹಪ್ಪಳಗಳ ಮೇಲೆ ಕ್ರಮವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಗಳನ್ನು ಸಮನಾಗಿ ಹರಡಿ. ನಂತರ ಮೆಣಸಿನ ಹುಡಿ, ಜೀರಿಗೆ ಹುಡಿ, ಗರಮ್ ಮಸಾಲೆಗಳನ್ನು ಸಮನಾಗಿ ಉದುರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಪಾಪಡ್ ತಯಾರು. ಸೂಪ್ ನೊಂದಿಗೆ ಸೂಪರ್ ಕಾಂಬಿನೇಶನ್.