ಮಹಾನಗರದಲ್ಲಿ ಬಸ್ ಪ್ರಯಾಣ ಇಷ್ಟು ದುಬಾರಿ ಆಯ್ತಾ... ರಘೋತ್ತಮ್ ಕೊಪ್ಪರ
ಮಹಾನಗರದಲ್ಲಿ ಬಸ್ ಪ್ರಯಾಣ ಇಷ್ಟು ದುಬಾರಿ ಆಯ್ತಾ...
ಬಸ್ ದರ ಇಂದಿನಿಂದ ಹೆಚ್ಚು. ದರ ಅನ್ನೊ ಪದ ಕೇಳಿದರೆ ಹೆಚ್ಚು ಅನ್ನೊ ಭಾವನೆ ಬಂದಿದೆ. ಕಮಲಾನಗರದಲ್ಲಿ ಮನೆ ಮಾಡಿ ವೈಟ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿರುವರ ಗೋಳಂತೂ ಹೇಳತೀರದು. ಬಸ್ಸಿನಲ್ಲಿ ಜೋತು ಬಿದ್ದು ಹರಸಾಹಸ ಮಾಡಿ ಆಫೀಸ್ ತಲುಪಿದರೆ ಅದು ಒಂದು ಸಾಧನೆಯೇ ಸರಿ. ದಿನಕ್ಕೆ ಸಾಮಾನ್ಯವಾಗಿ ೩೦-೫೦ ರೂ ವರೆಗೆ ತಿನ್ನಲು ಮತ್ತು ಕಾಫಿ ಕುಡಿಯಲು ಖರ್ಚು ಮಾಡಿದರೆ ಬಸ್ ಗೆ ತಿಂಗಳಿಗೆ ೫೦೦ ರೂ. ಪಾಸ್ ಗಾಗಿ ತೆಗೆದಿಡಬೇಕು. ನೋಡಿ ಎಷ್ಟು ದುಬಾರಿ. ಇಂದಿನಿಂದ ಪಾಸ್ ದರವೂ ಹೆಚ್ಚಳ, ಮತ್ತೆ ಇವತ್ತು ಸಂಬಳ ಬಂದರೆ ಮತ್ತೆ ಮುಂದಿನ ತಿಂಗಳ ಪಾಸ್ ಗಾಗಿ ತೆರೆದಿಡಬೇಕು ಎನ್ನುವ ದುಗುಡು ಎಲ್ಲರನ್ನೂ ಕಾಡುತ್ತಿದೆ. ನಮ್ಮನ್ನು ಆಫೀಸ್ ಗೆ ತಲುಪಿಸುವ ಕಾಯಕವನ್ನು ತಪ್ಪದೆ ಮಾಡುತ್ತಿರುವ ಸಾರಿಗೆ ಸಂಸ್ಥೆ ನಮ್ಮ ಮೇಲೆ ಸ್ವಲ್ಪ ಕರುಣೆ ತೋರಿ ಬಸ್ ಪಾಸ್ ದರ ಕಡಿಮೆ ಮಾಡಿದರೆ ಸಮಾಧಾನವಾಗುತ್ತೆ ಈ ಜೀವಗಳಿಗೆ. ಆದರೆ ಎನು ಮಾಡುವುದು ಒಂದೊಂದು ಸಾರಿ ಆ ಬಸ್ ಗಳೂ ನಮ್ಮನ್ನು ನೋಡಿ ಬಯ್ಯುತ್ತಿವೆ ಅನ್ಸುತ್ತೆ. ಬೆಳಿಗ್ಗೆ ಆದ್ರೆ ರೆಡಿ ಒಂದೇ ಬಸ್ ಗೆ ೫೦ ಜನ ಜೋತು ಬಿದ್ದು, ಆ ಬಸ್ಸು ಪಾಪ ಹೆಣಗಾಡಿಬಿಡುತ್ತೆ. ಆದರೆ ನಾವೂ ಎನು ಮಾಡಬೇಕು. ಹೊಟ್ಟೆ ಇದೆಯಲ್ಲ ಅಂದು ಅದನ್ನು ಏರಿ ಕುಳಿತುಬಿಡುತ್ತೇವೆ. ಇಅರಲಿ ಬಿಡಿ ಅದನ್ನು ಮರೆತು ವೀಕ್ ಎಂಡ್ ಮಜಾ ಮಾಡೋಣ.......