ಮಹಾಬಲಿ

ಮಹಾಬಲಿ

ಕವನ

ಆಧ್ಯಾತ್ಮಿಕ ಮಹತ್ವದ ಪ್ರಚಾರ ನಿಷ್ಠೆ

ಕೇರಳದ ಬಾಂಧವರ ಶ್ರದ್ಧಾಭಕ್ತಿಯ ಪೂಜೆ

ಮಹಾಬಲಿ ಭೂಮಿಗೆ ಬರುವ ಸಂಕೇತ ದಿನ

ಮಹಾವಿಷ್ಣು ವಾಮನನಾದ ದಶಾವತಾರದ ಪುಣ್ಯ ಪರ್ವ

 

ಹೆಂಗಳೆಯರಿಗೆ ಸಂಭ್ರಮ ಸಡಗರ

ಹೂವಿನ ರಂಗವಲ್ಲಿಗಳ ಅನುಪಮ ಸೌಂದರ್ಯ

ನಡುವೆ ದೀಪಗಳ ಮಂದ ಜ್ವಾಲೆ

ಸಮೃದ್ಧಿ ಸಂಕೇತಗಳ ಸರಮಾಲೆ

 

ಹದಿಮೂರು ಬಗೆಯ ಭಕ್ಷ್ಯಗಳ ಘಮಘಮ

ಅಕ್ಕಿ ಹಾಲು ಸಕ್ಕರೆಯ ಪಾಯಸ ಅರ್ಪಣೆ

‌ನೆಮ್ಮದಿ ಸುಖಶಾಂತಿ ನೀಡೆಂಬ ಕೇಳಿಕೆ

ವಿಶಿಷ್ಟ ಪುಷ್ಪಗಳ ಅಲಂಕಾರದ ಭೂಮಿಕೆ

 

ವಲ್ಲಂಕಾಳಿ ದೋಣಿಯೋಟ ಸ್ಪರ್ಧೆಯ ವೈಭವ

ಹುಲಿವೇಷ ತೊಟ್ಟ ಪುಲಿಕಲಿ ನೃತ್ಯ

ನೃತ್ಯ ಸಂಗೀತ ಕಥಕ್ಕಳಿ  ಪಾಕಶಾಸ್ತ್ರ ಪ್ರದರ್ಶನ

ಗಜಗಳಿಗೆ ಆಭರಣ ಶೃಂಗಾರ ಮೆರವಣಿಗೆ

 

ಬಂಧು ಬಾಂಧವರೊಡಗೂಡಿ ಆನಂದ

ಪರಸ್ಪರ ಶುಭಾಶಯಗಳ ವಿನಿಮಯ ಸಂದೇಶ

ದೇವಾಲಯಗಳಲಿ ವಿಶೇಷ ಹೂವಿನ ಅಲಂಕಾರ ಸೇವೆ

ಓಣಂ ಹಬ್ಬದ ಆಚರಣೆಯ ಶ್ರಾವಣ ಮಾಸ

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್