ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ?

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ?

Comments

ಬರಹ

ಮುಂಬೈ ಭಯೋತ್ಪಾದನೆಯಲ್ಲಿ ವೀರಮರಣ ಅಪ್ಪಿದ ಧೀರ ಅಧಿಕಾರಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹಿಂದು ಮೂಲಭೂತವಾದಿಗಳು ಹತ್ಯೆಗೈದಿದ್ದಾರೆಯೇ? ಇರಬಹುದು ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ಅಬ್ದುಲ್ ರೆಹಮಾನ್ ಅಂತುಳೆ.

ಇಡೀ ದೇಶವೇ ಆಶ್ಚರ್ಯ ಮತ್ತು ನಿಬ್ಬೆರಗಾಗುವಂತ ಮಹತ್ವದ ಪ್ರಕರಣವನ್ನು ಭೇದಿಸಿದ ಕೀರ್ತಿ ಹೇಮಂತ್ ಕರ್ಕರೆಗೆ ಸಲ್ಲಬೇಕು. ಇಷ್ಟು ದಿನ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವವರು ಬರೀ ಮುಸ್ಲಿಮರು ಎಂದು ತಿಳಿದುಕೊಂಡಿದ್ದ ಭಾರತೀಯರಿಗೆ ಹಿಂದು ಧಾರ್ಮಿಕ ಸಂಘಟನೆಗಳ ಮುಖಂಡರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪರಿಚಯ ಮಾಡಿಕೊಟ್ಟ ಸೂಪರ್ ಅಧಿಕಾರಿ ಕರ್ಕರೆ ಎಂದು ಅಂತುಳೆ ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೊಂಡಾಡಿದ್ದಾರೆ.

ಜೀವದ ಹಂಗನ್ನೇ ತೊರೆದ ಹೇಮಂತ್ ಕರ್ಕರೆ ಇದೇ ವರ್ಷ ಸೆ. 29 ರಂದು ನಡೆದ ಮಾಲೇಗಾಂವ್ ಸ್ಫೋಟದಲ್ಲಿ ಹಿಂದು ಮೂಲಭೂತವಾದಿಗಳ ಕೈವಾಡವಿರುವುದನ್ನು ಹೊರಗೆಳೆದಿದ್ದರು. ಇದು ಕೆಲ ಹಿಂದುಪರ ಸಂಘಟಗಳಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿತ್ತು. ಕರ್ಕರೆ ವಿರುದ್ಧ ಅನೇಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿರುವುದು ಗೊತ್ತಿರುವ ಸಂಗತಿ ಎಂದು ಅಂತುಳೆ ಹೇಳಿದರು.

ನವೆಂಬರ್ 26ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಹೇಮಂತ್ ಕರ್ಕರೆ ಉಗ್ರರಿಂದ ಹತರಾದರೆ? ಅಥವಾ ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಸಹನೆಯಿಂದ ಕುದಿಯುತ್ತಿದ್ದ ಹಿಂದುಪರ ಸಂಘಟನೆಗಳು ಈ ಕೃತ್ಯ ನಡೆಸಿದವೆ ಎನ್ನುವುದು ಸ್ಪಷ್ಟವಾಗಬೇಕಿದೆ ಎಂದು ಸಚಿವ ಎ ಆರ್ ಅಂತುಳೆ ಪ್ರಶ್ನಿಸಿದ್ದಾರೆ. ಸಚಿವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet