ಮಹಾಲಕ್ಷ್ಮಿ ಬಾರಮ್ಮ

ಮಹಾಲಕ್ಷ್ಮಿ ಬಾರಮ್ಮ

ಕವನ

ಭಾಗ್ಯದ ಲಕ್ಷ್ಮಿ ನೀನಮ್ಮ ಬಾರಮ್ಮ ಬಾರಮ್ಮ

ಸೌಭಾಗ್ಯದ ಲಕ್ಷ್ಮಿ ನೀನಮ್ಮ ಬಾರಮ್ಮ ಬಾರಮ್ಮ           ||ಪ||

 

ಮಹಾಲಕ್ಷ್ಮಿಯ ವೃತವನು ಮಾಡಿಹೆ ಮನೆಗೆ ಬಾರಮ್ಮ

ಪೂಜಾ ಮಂದಿರ ಶುಚಿಯ ಮಾಡಿಹೆ ಮನೆಗೆ ಬಾರಮ್ಮ || ೧ ||

 

ಹೊಸ್ತಿಲ ಮುಂದೆ ರಂಗೋಲಿ ಬಿಡಿಸಿಹೆ ಮನೆಗೆ ಬಾರಮ್ಮ

ವಿಗ್ರಹ ತರುತಲಿ ಅಲಂಕರಿಸಿಹೆನು ಮನೆಗೆ ಬಾರಮ್ಮ        || ೨ ||

 

ಪೂಜೆಯ ಮಾಡುತ ನೈವೇದ್ಯ ಮಾಡಿಹೆ ಮನೆಗೆ ಬಾರಮ್ಮ

ಆರತಿ ಬೆಳಗುತ ಸ್ತೋತ್ರವ ಪಠಿಸಿಹೆ ಮನೆಗೆ ಬಾರಮ್ಮ        || ೩ ||

 

ದೇವರ ದೀಪವು ಚೆಂದದಿ ಬೆಳಗಿದೆ ಮನೆಗೆ ಬಾರಮ್ಮ

ಪ್ರಸಾದ ಪಡೆಯುತ ನಿನ್ನನು ಬೇಡಿಹೆ  ಮನೆಗೆ ಬಾರಮ್ಮ      || ೪ ||

 

ನನ್ನಯ ಕೇಳಿಕೆ ನಿನ್ನಲಿ ಸೇರಲು ಮನೆಯಲಿ ನಿಂತ್ಯಮ್ಮ

ಬಂದಿಹ ಕಷ್ಟವ ನೀಗುತ ನಗುತ ಮನೆಯಲಿ ನಿಂತ್ಯಮ್ಮ         || ೫ ||

 

-ಹಾ ಮ ಸತೀಶ ಬೆಂಗಳೂರು

ಚಿತ್ರ್