ಮಹಾಶಕ್ತಿ ಅಯ್ಯಪ್ಪ

ಮಹಾಶಕ್ತಿ ಅಯ್ಯಪ್ಪ

ಕವನ

ಮೋಹಿನಿಯ ರೂಪ ಲಾವಣ್ಯ

ಸೆಳೆಯಿತು ಪರಶಿವನ ಕಣ್ಣ

ಉದ್ಭವಿಸಿದ ಮಹಾಶಕ್ತಿ

ಇವನೆ ಅಯ್ಯಪ್ಪ ಕಾಣ//

 

ಮಣಿಕಂಠನೆಂಬ ಹೆಸರ ಕಾರಣ

ಕೊರಳ ಸುತ್ತ ಆಭರಣ

ಶಬರಿಮಲೆಯ  ತಾಣ

ಆಯುಧ ಬಿಲ್ಲು ಬಾಣ//

 

ಹುಲಿಯನೇರಿ ಬರುವೆ

ಭಕುತರಿಗೆ ವರವ ಕೊಡುವೆ

ಶಾಸ್ತ್ರ ಸಂಸ್ಕೃತಿಯ ನೆಲೆವೀಡು

ದೇವ ನಿನ್ನ ನೆಲೆಯು ನೋಡು//

 

ಪಂಪಾ ಸರೋವರ ತೀರ

ವಾವರನ ಮಣಿಸಿದ ಧೀರ

ಕೇಳು ಪಂಡಿತನ ನಾಶ ಗೈದೆ

ಲೋಕ ಕ್ಷೇಮವ ನೀಡಿದೆ//

 

ಇರುಮುಡಿಯ ಶಿರದಿ ಹೊತ್ತು

ಹದಿನೆಂಟು ಮೆಟ್ಟಿಲ ಏರಿ

ತುಪ್ಪದ ಆರತಿ ಬೆಳಗಿ

ವ್ರತವ ಮಾಡುವರು ನಿಷ್ಠೆಯಲಿ//

 

-ರತ್ನಾ ಭಟ್ ತಲಂಜೇರಿ

 

ಚಿತ್ರ್