ಮಹಾ ಮಹಿಮರು

ಮಹಾ ಮಹಿಮರು

ಕವನ

ಕವಿಯ ಕಲ್ಪನೆಯ ಅರಿಯದೇ ಹೋದವರು

ತಮ್ಮದೇ ದಾರಿಯಲಿ ನಡೆವ ಗಜರಿವರು

ಹೊತ್ತು ಮುಳುಗಿದ್ದೂ ಬೆಳಕಿಹುದು ಎನ್ನುವರು

ಕವಿ ತತ್ವ ದಾರಿಯನೆ ಮರೆತು ಹೇಳುವರು !

***

ಗಝಲ್

ಹಣತೆಯು ಉರಿಯದೆ ಬೆಳಕು ಉಳಿವುದೆ ಹೇಳು

ಕನಸನು ಕಾಣದೆ ಬದುಕು ಹೊಳೆವುದೆ ಹೇಳು

 

ಹರೆಯವು ಹೊಸಿಲನು ದಾಟದೇ ಒಳಗೆ ಅರಳದೆ

ಮನದೊಳಗಿನ ಸೌಧವು ಎಂದಾದರು ಅಳಿವುದೆ ಹೇಳು

 

ಜೀವನದ ಪಲ್ಲವಿಯ ಅನುಭವಿಸಿ ಬಿಡು ಇನ್ನಾದರು

ಕನಸದು ತನುವಿನ ತುಂಬೆಲ್ಲ ಸುಳಿವುದೆ ಹೇಳು

 

ಜಂಜಾಟವು ಬಾಳಲಿ ಸೇರುತಿರೆ ನನಸದು ಮೂಡುವುದೆ

ಗಾಳಿಪಟವು ಬಣ್ಣವನು ಚಂದ್ರಗೆ ಬಳಿವುದೆ ಹೇಳು

 

ತೆರೆಯಲು ಕದವನು ಓಡೋಡಿ ಬರುವನೆ ಈಶಾ

ಗುಡಿಸಲ ಪ್ರೀತಿಯದು ಪ್ರೇಮವ ತುಳಿವುದೆ ಹೇಳು

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್