ಮಹಿಳಾ ದಿನದ ವಿಶೇಷ...!!!!
ಕವನ
ಕಛೇರಿಯ ತುಂಬೆಲ್ಲ ಓಡಾಡಿದ್ದಳು ನೀರೆ..
ಮೈತುಂಬ ಉಟ್ಟು ಬಣ್ಣಬಣ್ಣದ ಸೀರೆ.
ಅಂದಾಗಿತ್ತು ಭಾರತೀಯ ಸಂಸ್ಕ್ರುತಿಯ ಅನಾವರಣ
ಇದಕೆಲ್ಲ ಮಹಿಳಾ ದಿನವೇ ಕಾರಣ......!!!!!
ಸಂಭ್ರಮದಿ ತೊಟ್ಟಿದ್ದಳು ತರೇವಾರಿ ಉಡಿಗೆ..
ಅತ್ತಿಂದಿತ್ತ ವೈಯಾರದ ಹಂಸನಡಿಗೆ..
ಕೆಲಸದೊತ್ತಡದಲೂ ಬಯಸದೆ ಏಕಾಂತ
ಎಲ್ಲರೋಡಗೂಡಿ ಫೋಟೊ ಕ್ಲಿಕ್ಕಿಸುವ ಧಾವಂತ..!!!!!
ತಾಯಿಯಾಗಿ , ಸೋದರಿಯಾಗಿ ಸಂತೈಸಿದವಳು
ಸ್ನೇಹಿತೆಯಾಗಿ , ಪ್ರೇಯಸಿಯಾಗಿ ಮನವನರಿತವಳು
ಸಹನಮೂರ್ತಿಯ ಮನದಲಿ ಭಾವನೆಗಳು ಕೋಟಿ..
ಅವಳಿಲ್ಲದ ಬದುಕಿಗೆ ನರಕವೇ ಸಾಟಿ...!!!!!
ಅಂದು ನನಗನ್ನಿಸಿತು ಇವಳೇ ಭಾರತೀಯ ದೇವಿ...
ಮರುದಿನವೇ ಬದಲಾಗಿದ್ದಳು ಮಾಡ್ರನ್ ಮೂದೇವಿ
ನೋವಲಿ ಕಿವುಚಿತ್ತು ಒಂದುಕ್ಷಣ ಮನ..
ವರ್ಷವಿಡೀ ಆಚರಿಸಬಾರದೆ ಮಹಿಳಾ ದಿನ...!!!!
ವಿ.ಸೂ ;- ಯಾರಿಗೂ ನೊವುಂಟುಮಾಡುವ ಉದ್ದೇಶವಿಲ್ಲ. ಇದು ಕೇವಲ ನನ್ನ ಭಾವನೆ ಮಾತ್ರ.. ನೋವಾಗಿದ್ದರೆ ಕ್ಷಮೆಯಿರಲಿ...
Comments
ಉ: ಮಹಿಳಾ ದಿನದ ವಿಶೇಷ...!!!!
ಉ: ಮಹಿಳಾ ದಿನದ ವಿಶೇಷ...!!!!
ಉ: ಮಹಿಳಾ ದಿನದ ವಿಶೇಷ...!!!!
ಉ: ಮಹಿಳಾ ದಿನದ ವಿಶೇಷ...!!!!
ಉ: ಮಹಿಳಾ ದಿನದ ವಿಶೇಷ...!!!!
ಉ: ಮಹಿಳಾ ದಿನದ ವಿಶೇಷ...!!!!
ಉ: ಮಹಿಳಾ ದಿನದ ವಿಶೇಷ...!!!!