ಮಹಿಳಾ ಲೋಕ

ಮಹಿಳಾ ಲೋಕ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕಿ : ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರುನವ
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ : ೨೦೨೨

ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾಗಿ ವಿಂಗಡಿಸಿ 'ಹೊಸತು ಸಂಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ.

ಈ 'ಮಹಿಳಾ ಲೋಕ' ೩೪ ಲೇಖನಗಳ ಸಂಕಲನ. ಹೊಸತು ಪತ್ರಿಕೆಯ ಆರಂಭದ ಐದು ವರ್ಷಗಳ ಅರವತ್ತು ಸಂಚಿಕೆಗಳಿಂದ ಈ ಲೇಖನಗಳನ್ನು ಆಯ್ದುಕೊಳ್ಳಲಾಗಿದೆ.

'ಮಹಿಳಾ ಲೋಕ' ಸಂಪುಟವನ್ನು ಸಂಪಾದಿಸಿ ಕೊಟ್ಟವರು ನೇಮಿಚಂದ್ರ. ಅವರು ಕತೆಗಾರ್ತಿಯಾಗಿ, ಅಂಕಣಗಾರ್ತಿಯಾಗಿ ಪರಿಚಿತರು. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ, ಪ್ರವಾಸಾಯುಕ್ತ ಸಾಹಸಿ. ಇವರ ಬದುಕು ಬದಲಿಸಬಲ್ಲುದು, ಸಾವೇ, ಬರುವುದಿದ್ದರೆ ನಾಳೆ ಬಾ !, ಸೋಲೆಂಬುದು ಅಲ್ಪವಿರಾಮ, ಸಂತಸ ನನ್ನೆದೆಯ ಹಾಡು ಹಕ್ಕಿ' ಬದುಕು ಬದಲಿಸಿದ ಭಾವೇಶ್ ಭಾಟಿಯಾ, ಯಾದ್ ವಶೇಮ್ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಶ್ವಮಾನ್ಯರು ಮಾಲಿಕೆಯಲ್ಲೂ ಇವರ ಕೃತಿಗಳು ಪ್ರಕಟವಾಗಿವೆ.