ಮಹಿಳೆ
ಪ್ರತಿಯೊಬ್ಬ ಮನುಷ್ಯನೂ ಯಾವುದೇ ಆಚರಣೆಯನ್ನು ನೋಡಿದಾಗ, ಪಾಲಿಸಿದಾಗ, ಅದರಲ್ಲಿ ಅಅಡಗಿರುವ ವೈಜ್ಞಾನಿಕ ಮನೋಭಾವವನ್ನು, ವಿಚಾರವನ್ನು ಅರಿಯಬೇಕು. ಹಿಂದಿನ ಕಾಲದಲ್ಲಿ, ಟೈಲ್ಸ್, ಗ್ರಾನೈಟ್ ಮುಂತಾದುವನ್ನು ಅಳವಡಿಸಿದ ನೆಲವಿರಲ್ಲಿಲ್ಲ. ಮುಂಜಾನೆ ಎದ್ದ ಮಹಿಳೆ ಸಗಣೆಯನ್ನು ನೀರಿನಲ್ಲಿ ಬೆರಸಿ, ನೆಲ ಹಾಗೂ ಗೋಡೆ ಸಾರಿಸುತ್ತಿದ್ದಳು. ಸಗಣೆಯಲ್ಲಿರುವ ಮೀಥೇನ್ ಅನಿಲ, ನೀರಿನಲ್ಲಿ ಮಿಶ್ರಣವಾಗಿ, ಎಳೆ ಬಿಸಿಲಿನ ಅಲ್ಟ್ರ ವಯೋಲೆಟ್ ಕಿರಣಗಳು ಹಾಗೂ ಗಾಳಿಯ ಜೊತೆ ಬೆರೆತು, ಫಾರ್ಮಲಿನ್, ಉತ್ಪತ್ತಿಯಾಗುತ್ತಿತ್ತು. ಎಲ್ಲ ಬ್ಯಾಕ್ಟೀರಿಯಾ, ವೈರಸ್ ಹಾಗೂ ಕ್ರಿಮಿಕೀಟಗಳನ್ನು ಕೊಲ್ಲುವ ಶಕ್ತಿ ಫಾರ್ಮಲಿನ್ ಗಿದೆ. (ಈಗಲೂ ಸಹಾ ಪೆಥಾಲಜಿ ವಿಭಾಗದಲ್ಲಿ ದೇಹದಿಂದ ಹೊರ ತೆಗೆದ ಅಂಗಾಂಗಗಳನ್ನು ಕೆಡದಂತೆ ಇಡಲು, ಹಾಗೂ ಅಪರೇಷನ್ ಥಿಯೇಟರ್ ನಲ್ಲಿ ಬ್ಯಾಕ್ಟಿರಿಯಾ ಇಲ್ಲದಂತೆ ಮಾಡಲು ಫಾರ್ಮಲಿನ್ ಬಳಸುವೆವು). ಮನೆಗೆ ಬಂದವರು, ಅಂಗಳದಲ್ಲಿ ನೀರಿನಿಂದ ಕಾಲು ತೊಳೆದುಕೊಂಡು ಮನೆಯೊಳಗೆ ಬರುವಾಗ, ಅವರು ಸಗಣೆ ಸಾರಿಸಿದ ನೆಲದ ಮೇಲೆ ನಡೆದಾಗ, ಅವಳ ಅಂಗಾಲುಗಳು ಬ್ಯಾಕ್ಟಿರಿಯಾದಿಂದ ಮುಕ್ತವಾಗುತ್ತಿದ್ದವು.
ಈಗ, ಚಪ್ಪಲಿ ಹಾಕಿಕೊಂಡು ಮನೆಯ ತುಂಬಾ ಓಡಾಡುವ ಯುಗ.
• ಎಲ್ಲರ ಮನೆಯಲ್ಲೂ ಮಿಕ್ಸಿ ಇದೆ. ರುಬ್ಬಿವುದಿರಲ್ಲಿ ರುಬ್ಬುವ ಕಲ್ಲು ಮನೆಯಲ್ಲಿಲ್ಲ ಎಂಬ ಮಾತನ್ನು ಯಾರೂ ಒಪ್ಪಲ್ಲಿಲ್ಲ. ಯಾಕೆ? ರುಬ್ಬುವ ಗುಂಡು ಎಲ್ಲರ ಮನೆಯಲ್ಲಿದೆ. ಅದು ಲಕ್ಷ್ಮಿ, ಮನೆಯಲ್ಲಿರಬೇಕು ಎಂದು, ಆದರೆ ಎಲ್ಲಿದೆ? ಅನೇಕರ ಮನೆಯ ಹಿತ್ತಲಲ್ಲಿ ಉಪಯೋಗಿಸದೆ ಇರುವ ರುಬ್ಬುವ ಕಲ್ಲಿನ ಹಳ್ಳದಲ್ಲಿ ಮಳೆ ನೀರು ನಿಂತು, ಈಡಿಸ್ ಸೊಳ್ಳೆಯ ಸಂತಾನೋತ್ಪತ್ತಿಯಾಗುತ್ತಿದೆ ಇದನ್ನು ತಡೆಯಬೇಕಾಗಿದೆ.
• ಮಹಿಳೆ ವಿಜ್ಞಾನ ವಿಚಾರಗಳನ್ನು ಅರಿಯಲು, ಜ್ಞಾನ ಸಂಪಾದಿಸಲು, ಯಾವುದೇ ರೀತಿಯಲ್ಲಿ ಮುಂದೆ ಬರಲು ಆರೋಗ್ಯವಂತಳಾಗಿರಬೇಕು, ಆಕೆ ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಸುಸ್ಥಿತಿಯಲ್ಲಿದ್ದರೆ ಮಾತ್ರ ಏನನ್ನೂ ಬೇಕಾದರೂ ಸಾಧಿಸಬಹುದು.
• ಇದಕ್ಕಾಗಿ ಮಾನಸಿಕ ಶಾಂತಿ, ಧೃಡನಿರ್ಧಾರ, ಸಕಾರಾತ್ಮಕ ಚಿಂತನೆ, ನಿರ್ಮಲ ಮನಸ್ಸು ಅವಶ್ಯ. ಮನಸ್ಸನ್ನು ಸಿದ್ದಪಡಿಸಲು ಸಮಾಧಾನವಾಗಿರಿಸಲು ಧ್ಯಾನದಿಂದ ಸಾಧ್ಯ. ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು.
• ಹೆಣ್ಣಾಗಿ ಹುಟ್ಟದ್ದೀರ, ನಿಮಗೆ ಸಂತೋಷವಿರಲಿ. ದೇವರು ಹೆಣ್ಣನ್ನು ಸುಂದರವಾಗಿ ಸೃಷ್ಠಸಿರುವುದಷ್ಠೇ ಅಲ್ಲ. ಅತ್ಯಂತ ಅಪರೂಪ ಹಾಗೂ ವಿಶೇಷತೆಯನ್ನು ನೀಡಿದ್ದಾನೆ. ನವಜಾತ ಹೆಣ್ಣುಮಕ್ಕಳ ಮರಣಸಂಖ್ಯೆ ನವಜಾತ ಗಂಡು ಮಕ್ಕಳಿಗಿಂತ ಕಡಿಮೆ.
• ಸಮತೋಲನ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ, ಯಥೇಚ್ಛವಾದ ತರಕಾರಿ, ಸೊಪ್ಪು, ಸೇವನೆ, ದಿನಕ್ಕೊಂದು ಬಾಳೆಹಣ್ಣು ಸೇವನೆ, ಶೇ. 10-15ರಷ್ಠು ಜಿಡ್ಡಿನ ಪದಾರ್ಥ ಇವುಗಳು ಆರೋಗ್ಯಕರ.
• ದಿನನಿತ್ಯ ಬೇಕರಿ ಪದಾರ್ಥಗಳು, ನಾಲಿಗೆಗೆ ರುಚಿಯಾದ ಆಹಾರ ರಸ್ತೆಬದಿಯ ಶುಚಿತ್ವವಿಲ್ಲದೆ ಮಾರುವ ಆಹಾರವನ್ನೆ ಸೇವಿಸುತ್ತಿದ್ದಲ್ಲಿ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ.
• ಹೆಣ್ಣು ಮಕ್ಕಳು ಎತ್ತರಕ್ಕೆ ಸರಿಯಾದ ತೂಕವಿರಬೇಕು. ಬೊಜ್ಬು, ಸ್ಥೂಲಕಾಯದಿಂದ ಅನಾರೋಗ್ಯ ಖಂಡಿತ. ಪ್ರತಿಯೊಬ್ಬ ಮಹಿಳೆಯೂ ಸುಂದರವಾಗಿರುವಳು. ಮತ್ತೋಬ್ಬರೊಡನೆ ಹೋಲಿಕೆ ಬೇಡ.
• ಕೂದಲು ಉದುರುವುದೂ ಸಹ ಕಬ್ಬಿಣಾಂಶದ ಕೊರತೆಯಿಂದ.
• ಮಹಿಳೆಯಾದವಳು ಮನೆಯ ಮಂದಿಯೆಲ್ಲರ ಲಾಲನೆ, ಪಾ¯ನೆ, ಜೊತೆಗೆ ತನ್ನ ಆರೋಗ್ಯದ ಕಡೆಯೂ ಗಮನ ಹರಿಸಬೇಕು. ತಾನು ಆರೋಗ್ಯವಂತಳಾಗಿದ್ದರೆ, ಮನೆಯವರೆಲ್ಲರನ್ನೂ ಆಕೆ ಕಾಪಾಡಬಲ್ಲಳು.
• ಕರೀಬೇವಿನ ಪುಡಿ, ಅಗಸೆ, ಸೋಯಾಬೀನ್, ಹಾಲು, ಮೊಸರು, ಮಜ್ಜಿಗೆ, ಬಳಕೆ ನಿರಂತರವಾಗಿರಲಿ. 30 ವರ್ಷ ವಯಸ್ಸಾಗುವವರೆಗೂ ಏನನ್ನಾದರೂ ಸೇವಿಸಬಹುದಾದರೂ ಸಹ ಸೇವಿಸಿದ ಕ್ಯಾಲೋರಿಗಳನ್ನು ವ್ಯಯ ಮಾಡದಿದ್ದರೆ, ದೇಹದಲ್ಲಿ ಕೊಬ್ಬು, ಶೇಖರಣೆಯಾಗುವುದು.
• ಗೃಹಿಣೆ ಮನಸ್ಸು ಮಾಡಿದರೆ ಸಂಸಾರ ಸ್ವರ್ಗವಾಗುವುದು. ಮನೆಯೊಡತಿಗೆ, ಪ್ರೀತಿ ಕೊಟ್ಟು ಆಕೆಯನ್ನು ಸಂತೋಷವಾಗುಡುವುದು ಪುರುಷರ ಕರ್ತವ್ಯ.
Comments
ಉ: ಮಹಿಳೆ