ಮಾಂಗಲ್ಯ ಧಾರಣೆ
ಕವನ
ಮೊಳಗುತಿವೆ ಮಂಗಳವಾದ್ಯಗಳು ಮಂಟಪದೊಳಗಿಂದ
ಬರುತಿಹರು ಬಂಧು ಬಾಂಧವರು ಸಂಭ್ರಮದಿಂದ
ಸಿದ್ಧನಾದನು ವರನು ಸ್ವೀಕರಿಸಲು ಗೃಹಸ್ಥಾಶ್ರಮವ
ಸಿದ್ಧಳಾದಳು ವಧುವು ತೊರೆದು ಬರಲು ತಂದೆ ತಾಯಿಯ..
ಹೊರಟು ನಿಂತ ವರನನ್ನು ಮರಳಿ ಕರೆತಂದರು ಕಾಶಿಯಾತ್ರೆಯಿಂದ..
ಜೀರಿಗೆ ಬೆಲ್ಲವ ಹಾಕಲು ಹೇಳಿ ಹಿಡಿದರು ಅಂತರ್ಪಟವ ಮಧ್ಯದಲಿ..
ಸಿದ್ಧರಾದರು ವಧುವಿನ ತಂದೆ ತಾಯಿಯರು ಮಾಡಲು ಕನ್ಯಾದಾನವ..
ಅರಿಯದಾದೆನು ಅವರ ಕಣ್ಣಲ್ಲಿ ನೋವಿನ ಕಣ್ಣೀರೋ, ಆನಂದಭಾಷ್ಪವೋ...
ಗಟ್ಟಿಮೇಳವು ಮೊಳಗಲು ಮಾಡಿದನು ವರನು ಮಾಂಗಲ್ಯ ಧಾರಣೆಯ..
ಹರಸಿದರು ಅಕ್ಷತೆಯ ಹಾಕಿ ಬಂಧು ಬಾಂಧವರು ಸ್ನೇಹಿತರು...
ಕಾಲುಂಗುರವ ತೊಡಿಸಿ ದಾಟಿದೆವು ಸಪ್ತಪದಿಯ ಕೈ ಕೈ ಹಿಡಿದು..
ವಂದಿಸಿದೆವು ತಂದೆ ತಾಯಿಯರನು ಗುರು ಹಿರಿಯರನು..
ಲಾಡು ಚಿರೋಟಿ ಪಾಯಸದ ಘಮ ಘಮಿಸುವ ಭೋಜನವು..
ಎಲೆ ಅಡಿಕೆ ತಾಂಬೂಲ ತೆಗೆದುಕೊಂಡು ಹರಸಿದರು ಆಹ್ವಾನಿತರು..
ನೋಡ ನೋಡುತ್ತಿದ್ದಂತೆ ಖಾಲಿಯಾಯಿತು ಮಂಟಪವು...
ಹಳಬರಾದಂತೆ ಭಾಸವಾಯಿತು ನವ ವಧೂ ವರರಿಗೆ
Comments
ಉ: ಮಾಂಗಲ್ಯ ಧಾರಣೆ
In reply to ಉ: ಮಾಂಗಲ್ಯ ಧಾರಣೆ by MADVESH K.S
ಉ: ಮಾಂಗಲ್ಯ ಧಾರಣೆ
ಉ: ಮಾಂಗಲ್ಯ ಧಾರಣೆ
In reply to ಉ: ಮಾಂಗಲ್ಯ ಧಾರಣೆ by asuhegde
ಉ: ಮಾಂಗಲ್ಯ ಧಾರಣೆ
ಉ: ಮಾಂಗಲ್ಯ ಧಾರಣೆ
In reply to ಉ: ಮಾಂಗಲ್ಯ ಧಾರಣೆ by gopinatha
ಉ: ಮಾಂಗಲ್ಯ ಧಾರಣೆ
ಉ: ಮಾಂಗಲ್ಯ ಧಾರಣೆ
In reply to ಉ: ಮಾಂಗಲ್ಯ ಧಾರಣೆ by bhalle
ಉ: ಮಾಂಗಲ್ಯ ಧಾರಣೆ