ಮಾಡರ್ನ್ "ದ್ರೌಪದಿ ಮಾನಭಂಗ"

ಮಾಡರ್ನ್ "ದ್ರೌಪದಿ ಮಾನಭಂಗ"

 ಪಾತ್ರಗಳು:  ಧರ್ಮರಾಯ,  ದುರ್ಯೋಧನ, ಶಕುನಿ, ದುಃಶ್ಯಾಸನ, ದ್ರೌಪದಿ, ಕೃಷ್ಣ.
                        -------
(ಹಿನ್ನೆಲೆ ಹಾಡು - `ನಾ ಬೆಂಕಿಯಂತೆ, ನೀ ಗಾಳಿಯಂತೆ . . .’ ದುರ್ಯೋಧನ, ಶಕುನಿ,  ಹಾಡಿಗೆ ಹೆಜ್ಜೆ ಹಾಕುತ್ತಾರೆ)
ದುರ್ಯೋಧನ    :    ಮಾಮಾಶ್ರೀ match fixing  ಪಕ್ಕಾ ತಾನೇ? ಬೆಟ್ಟಿಂಗ್‍ಗೆ  ಧರ್ಮರಾಯನ್ನ  ಕರ್ದಿದ್ದೀನಿ.  ಆಮೇಲೆ  ಸೋತು ಪರಿಪಾಟಲಾಗಬಾರದು.
ಶಕುನಿ        :    ಆ್ಞ , you are doubting me? Me? ಯಾಕಪ್ಪಾ ? ದ್ವಾಪರ ಯುಗದಲ್ಲಿ   ಪಗಡೆ ಆಡಿ  ಗೆದ್ದದ್ದು ಮರ್ತುಹೋಯ್ತೇನು?
ದುರ್ಯೋಧನ    :    ಅದ್ಸರಿ... ಸರಿ, ಸರಿ, ಸುಮ್ನಿರು, ಧರ್ಮರಾಯ ಬಂದ.
ದುರ್ಯೋಧನ    :    Welcome ರಾಯರಿಗೆ, ರೆಡೀನಾ ಬೆಟ್ಟಿಂಗ್‍ಗೆ?
ಧರ್ಮರಾಯ    :    ಬೆಟ್ಟಿಂಗ್‍ಗೆ ನಾನ್ಯಾವತ್ತೂ ರೆಡೀನೇ..ಮಾ. ಅದು   ನನ್ನ ಫೇವರೆಟ್ ಗೇಮ್. ನೋಡಿಲ್ಲಿ, ನನ್ನ ಮೊಬೈಲ್ ಸ್ಕ್ರೀನ್ ಸೇವರ್‍ರೇ  ಬೆಟ್ಟಿಂಗ್ ರೇಸ್ ಕುದುರೆ. ಈ ಸಲಾ ಏನಾದ್ರೂ ನಾನು ಬೆಟ್ಟಿಂಗ್‍ನಲ್ಲಿ  ಸೋತ್ರೆ ಬೆಂಗಳೂರು southನ್ನು ನಿನಗೆ ಕೊಟ್ಬಿಡ್ತೀನಿ.
ದುರ್ಯೋಧನ    :    Land ಯಾವನಿಗೆ ಬೇಕು? Demonetisation ನಿಂದ ರಿಯಲ್  ಎಸ್ಟೇಟ್ ಬಿದ್ಹೋಗಿದೆ.  ಅದು ಬೇಡ. ನಿನಗೆ ಧಂ ಇದ್ರೆ, ನೀನು ಅಮ್ಮಾವ್ರ ಗಂಡ ಅಲ್ದಿದ್ರೆ, ದ್ರೌಪದೀನ ಪಣಕ್ಕಿಡು.
ಧರ್ಮರಾಯ    :    ಆ್ಞ , ಏನು ನನ್ನ ಗಂಡಸ್ತನದ ಮೇಲೇ ಛಾಲೆಂಜಾ?
            (ಹಿ. ಹಾ : ಗಂಡು ಎಂದರೆ ಗಂಡು, ಬೆಂಕಿ ಚೆಂಡು,  ಬಂಕಾಪುರದ ಬೆಂಕಿ ಚೆಂಡು,  ಬಹದ್ದೂರ್ ಗಂಡು . . . )
                          Done. ಯಾವ ಮ್ಯಾಚ್ ನಡೀತಿದೆ ಈಗ, ಬೆಟ್ಟಿಂಗ್‍ಗೆ?
ದುರ್ಯೋಧನ    :    ನಡೀತಿದ್ಯಲ್ಲಾ, ಇಂಡಿಯಾ - ಸೌತ್ ಆಫ್ರಿಕಾ ಮ್ಯಾಚು.
ಧರ್ಮರಾಯ    :    ಸರಿ ನನ್ನ ಬೆಟ್ಟಿಂಗ್ ಇಂಡಿಯಾ ಮೇಲೆ.
ದುರ್ಯೋಧನ    :    ಶಕುನಿ ಮಾಮ?
ಶಕುನಿ        :    ನಂ ಬೆಟ್ ಸೌತಾಫ್ರಿಕಾ  ಮೇಲೆ. 2 ಘಂಟೇಲಿ ಆಟ ಮುಗ್ಯತ್ತೆ ನೋಡೋಣ.
(ಪಕ್ಕಕ್ಕೆ ಬಂದು ಯಾರೊಂದಿಗೋ ಗುಪ್ತವಾಗಿ ಮಾತಾಡಿ, match fix  ಮಾಡುತ್ತಾನೆ. ನಂತರ ಎಲ್ಲರೂ  ಹೋಗಿ ಮತ್ತೆ ಸೇರುತ್ತಾರೆ)
ಧರ್ಮರಾಯ    :    ಏನಾಯ್ತು ಮ್ಯಾಚು?
ಶಕುನಿ        :    ಯಾಕೆ ಮೊಬೈಲಲ್ಲಿ ಇಂಟರ್ನೆಟ್ ಇಲ್ವಾ? ನ್ಯೂಸ್ ನೋಡು.
ಧರ್ಮರಾಯ    :    Net Pack ಖಾಲಿ ಆಗಿದ್ಯಪ್ಪಾ. ಇಲ್ದಿದ್ರೆ ನಿನ್ಯಾಕೆ ಕೇಳ್ತಿದ್ದೆ?
ಶಕುನಿ        :    ಇಂಡಿಯಾ ಸೋತಿದೆ. ಅಂದ್ರೆ ಬೆಟ್ಟಿಂಗ್‍ನಲ್ಲಿ ನಂ ದುರ್ಯೋಧನ ಗೆದ್ದಿದ್ದಾನೆ.  ಹ್ಹ  ಹ್ಹ  ಹ್ಹಾ . . . . .
ಧರ್ಮರಾಯ    :    ಅಯ್ಯೋ ಮತ್ತೆ ದ್ರೌಪದಿ ವಸ್ತ್ರಾಪಹರಣವೇ? ಗೊತ್ತಾದ್ರೆ ಭೀಮ ನನ್ನನ್ನ ಹೂತ್ಹಾಕಿ      ಬಿಡ್ತಾನೆ!
ದುರ್ಯೋಧನ    :    ಹ್ಹ  ಹ್ಹ  ಹ್ಹಾ . . . ದುಃಶ್ಶಾಸನಾ, ದ್ರೌಪದೀನ ಇಲ್ಲಿಗೆ ಎಳ್ಕೊಂಡು ಬಾ..
ದುಃಶ್ಶಾಸನ    :    ಅಷ್ಟೆಲ್ಲಾ ಕಷ್ಟ ಯಾಕೆ? SMS ಹಾಕಿದೀನಿ.  ಇನ್ನೆರಡು ನಿಮಿಷದಲ್ಲಿ  ಇಲ್ಲಿರ್ತಾಳೆ ಬಿಡು.
ಧರ್ಮರಾಯ    :    ಅಲ್ಲಯ್ಯಾ  ದುರ್ಯೋಧನಾ, ಯಾಕೀಪಾಟಿ ಕೋಪ ದ್ರೌಪದೀ ಮೇಲೆ?
ದುರ್ಯೋಧನ    :    ಇಲ್ವಾ ಮತ್ತೆ. ಆವತ್ತು ಗೋಪಾಲನ್‍ ಮಾಲ್‍ಗೆ  ಹೋದಾಗ, ಸಿಕ್ಬಿಟ್ಟು, ನನ್ನ  ಗಾಗಲ್ಸ್ ನೋಡಿ `ಕುಲ್ಡನ್ ಮಗ ಕುಲ್ಡ' ಅನ್ಲಿಲ್ವಾ? ಜೊತೆಗೆ, ಗಾಗಲ್ ಹಾಕ್ಕೊಂಡು  ಗೂಗಲ್ ನೋಡೋ ಪಾಗಲ್ ಅನ್ಬಿಡೋದಾ? ಸಿಟ್ಟು ಬರಲ್ವಾ?
ಧರ್ಮರಾಯ    :    ಏನೋ ಹಾಸ್ಯಕ್ಕೆ . . . .
ದುರ್ಯೋಧನ    :    ನನ್ನನ್ನೇನಾದ್ರೂ  ಅಂದಿದ್ರೆ ಚಿಂತೆಯಾಗ್ತಿತ್ತಿಲ್ಲ! 10000/- ಕೊಟ್ಟಿರೋ ನನ್ನ  ಗಾಗಲ್ಸ್‍ಗೆ  ಯಾರಾದ್ರೂ ಏನಾದ್ರೂ ಅಂದ್ರೆ ನಾನು ಸುಮ್ಮನಿರೋನಲ್ಲ!
ದುಃಶ್ಶಾಸನ    :    ಅಯ್ಯೋ ನಿಮ್ಮ ಜಗಳ ಯಾವಾಗಲೂ ಇದ್ದದ್ದೇ. ಸುಮ್ನಿರಿ, ದ್ರೌಪದಿ ಬಂದ್ಲು.
        (ಹಿ. ಹಾ: ಓಪನ್ ಹೇರು ಬಿಟ್ಕೊಂಡು, ಕೂದಲು ಹಾರಾಡಿಸ್ಕೊಂಡು...)
ದ್ರೌಪದಿ        :    ಏನಪ್ಪಾ ಧರ್ಮರಾಯ. ಯುಗ ಬದಲಾದ್ರೂ ನಿನ್ನ ಚಟ ಬದಲಾಗಲಿಲ್ಲವಲ್ಲ.  ಮತ್ತೆ ಬೆಟ್ಟಿಂಗ್‍ನಲ್ಲಿ ಸೋತ್ಯಾ?
ಧರ್ಮರಾಯ    :    ನಿಂಗ್ ಹ್ಯಾಗೆ ಗೊತ್ತಾಯ್ತು?
ದ್ರೌಪದಿ        :    ಸ್ವಾಮೀ, ಸ್ವಲ್ಪ update ಆಗಿರಪ್ಪಾ. ನೀನು ಸೋಲೋಕೂ ಮುಂಚೇನೇ  ಎಲ್ಲಾ ಟಿ.ವಿ. ನ್ಯೂಸ್ ಛಾನಲ್‍ನಲ್ಲಿ Breaking News ಆಗಿ ಬರ್ತಿದೆ.
            (ಹಿ. ಹಾ. MTV ಸುಬ್ಬುಲಕ್ಷ್ಮಿಗೇ ಬರೀ ಓಳು . . . )
ಧರ್ಮರಾಯ    :    ಭೀಮಂಗೆ ಗೊತ್ತಾಗಿಲ್ಲ ತಾನೇ?
ದ್ರೌಪದಿ        :    ನಂಗೊತ್ತಿಲ್ಲಪ್ಪಾ. . ಪಿಜ್ಜಾ ತಿಂತಿದ್ದವ್ನುAK 47 ಗನ್  ಎಲ್ಲಿ ಸಿಗತ್ತೆ ಅಂತ  ಅರ್ಜುನನ್ನ ಕೇಳಿ, ಇಬ್ರೂ  ಗೂಗಲ್‍ನಲ್ಲಿ ಸರ್ಚ್ ಮಾಡ್ತಿದ್ರು.
ದ್ರೌಪದಿ        :    ಅದ್ಸರಿ, ನನ್ನನ್ಯಾಕಪ್ಪಾ ಇಲ್ಲಿ ಕರ್ಸಿದ್ದು Mr. ದುಃಶಾಸನ್?
ಧರ್ಮರಾಯ    :    ಅಯ್ಯಾ ದುಃಶಾಸನ, ಮತ್ತೊಮ್ಮೆ ವಸ್ತ್ರಾಪಹರಣ ಮಾಡಬೇಡವಯ್ಯಾ! ಎಲ್ಲಾ  ಚಾನಲ್‍ನವರೂ  ಇನ್ನೊಂದ್ ವರ್ಷದವರೆಗೆ ಇಂಚಿಂಚಾಗಿ ಅದನ್ನೇ  ತೋರಿಸ್ತಿರ್ತಾರೆ.
ದುಃಶಾಸನ    :    ಅಯ್ಯಾ ಬಿಡ್ತೂನ್ನು, ನಂಗೇನು  ಬೇರೆ ಕೆಲಸ  ಇಲ್ವಾ? ಅದೂ, ನಾನು ಹಾಗೇ  ಇರ್ಲೀಂತ SBI ನಲ್ಲಿ ಕೆಲ್ಸಕ್ಕೆ ಸೇರ್ಕೊಂಡ್ ಬಿಟ್ಟೆ.  ಅದೊಂದೇ ನಾ ಮಾಡಿದ  ತಪ್ಪು! ಈಗ SBI Life, ಮ್ಯೂಚುವಲ್ ಫಂಡು ಮಾಡ್ಸು ಮಾಡ್ಸೂಂತ  ವಿಪರೀತ ಪ್ರೆಶರ್ರು. ಆಗಿಲ್ಲಾಂದ್ರೆ ಮೇಲ್ನವ್ರು ಎಲೆ ಅಡಿಕೆ ಹಾಕ್ಕೊಂಡು ಉಗೀತಿದ್ದಾರೆ.  ನುಂಗಾಂಗಿಲ್ಲ ಉಗುಳಾಂಗಿಲ್ಲ – ಉಗಿದಿದ್ದನ್ನಲ್ಲಾ – ಕೆಲಸದ ಬಗ್ಗೆ ಹೇಳಿದ್ದು. ಅದಕ್ಕೇ ದ್ರೌಪದಿ  ಹೆಸರಲ್ಲಿ ಒಂದಿಷ್ಟು SBI Life  ಮಾಡ್ಸುವಾಂತ!
ದ್ರೌಪದಿ        :    ಛಾನ್ಸೇ ಇಲ್ಲ – ಮರೆತು ಬಿಡು ಅದನ್ನ. ನನ್ಹತ್ರ ಎಲ್ಲಿ ದುಡ್ಡಿದೆ? ನಾನಂತೂ  SBI Life  ತೊಗೊಳೋಲ್ಲ.
ದುಃಶ್ಶಾಸನ    :    ಹಾಗಂದ್ರೆ  ಹೇಗೆ?  ನಿನ್ನ ಅಕೌಂಟ್‍ನಲ್ಲಿ  ಎಷ್ಟು ದುಡ್ಡಿದೇಂತ  ಬ್ಯಾಂಕಿನವ್ರಿಗೆ  ಗೊತ್ತಾಗೋಲ್ವೇ? ಪ್ರಶ್ನೇನೇ ಇಲ್ಲ. SBI Life ನಲ್ಲಿ 5 ಕೋಟಿ, ಮ್ಯೂಚುವಲ್  ಫಂಡಲ್ಲಿ 5 ಕೋಟಿ  ಹಾಕೋದೇನೇ.  ಬೇರೆ ಆಪ್ಶನ್ನೇ ಇಲ್ಲ.  ಧರ್ಮರಾಯ ಬೇರೇ ನಿನ್ನನ್ನು ಸೋತಿಲ್ವಾ? ನಾನು MDRT ಆಗಿ Europe Tour ಹೋಗ್ಬೇಕು!
ದ್ರೌಪದಿ        :    ಹಾಯ್, ಮೈ ಮರ್ ಜಾವಾs
            (ಹಿ. ಹಾ. ಇದು  ಯಾರು ಬರೆದ ಕಥೆಯೋs. . . )
            ಹ್ಞಾ ನನ್ನ ಆಪತ್ತಿಗಾಗೋವ್ನು ಕೃಷ್ಣ ಮಾತ್ರ.  ಓ ಗಿರಿಧರಾs . .  ಅಯ್ಯೋ  ಅಷ್ಟು ಜೋರಾಗಿ  ಕೂಗಿದ್ರೆ ನನ್ನ ಲಿಪ್‍ಸ್ಟಿಕ್ಕೆಲ್ಲಾ  ಹಾಳಾಗುತ್ತೆ. ವಾಟ್ಸಾಪ್  ಮೆಸೇಜ್ ಮಾಡಿಬಿಡ್ತೀನಿ.
            (ಹಿ. ಹಾ: ಕಿಟ್ಟಪ್ಪ ಕಿಟ್ಟಪ್ಪಾ ನಿನ್ನ ಪ್ಲೂಟು ಎಲ್ಲಪ್ಪಾ...)
ಕೃಷ್ಣ        :    (ಬಂದು) ಹಾಯ್ ಎವರಿಬಡೀ, ದ್ರೌಪದೀ  ಏನಮ್ಮಾ ಕರೆದೆಯಲ್ಲ.  ಏನ್  ಸಹಾಯ ಬೇಕಿತ್ತು?
ದ್ರೌಪದಿ        :    ಸದ್ಯ ಬಂದ್ಯಲ್ಲಾ. ಈ ದುಃಶಾಸನ  ನನ್ನಿಂದ ಎಲ್ಲವನ್ನೂ ದೋಚ್ತಾ ಇದ್ದಾನೆ.
ಕೃಷ್ಣ        :    ಇನ್ನೂ ವಸ್ತ್ರಾಪರಣ ಸೀನೇ ಶುರು ಆಗಿಲ್ಲ. ಮುಂಚೇನೆ ಯಾಕೆ  ಕರ್ದಿದ್ದು?  ಗೋಪಿಯರ ಜೊತೆ ಹಾಯಾಗಿರೋಕೂ ಬಿಡಲ್ವಲ್ಲಾ!
ದ್ರೌಪದಿ        :    ವಸ್ತ್ರಾಪಹರಣ ಇವನ ಕೈಲಿ  ಎಲ್ಲಿ ಆಗತ್ತೆ? ಮುಖ ನೋಡು! ವಿಷಯ ಅದಲ್ಲ.  ನನ್ಹತ್ರ ಇರೋ ದುಡ್ಡನ್ನೆಲ್ಲಾ SBI Life ಗೆ ಹಾಕ್ಸಿ ಮುಂಡಾ ಮೋಚಕ್ಕೆ  ಸ್ಕೆಚ್ ಹಾಕಿದಾನೆ_ ಈ ದುಶ್ಯಾಸನ.
ಕೃಷ್ಣ        :    ಅದ್ಸರೀನ್ನು, ಮೊನ್ನೆ ಯಾವನೋ ಒಬ್ಬ ಬ್ಯಾಂಕಿಗೆ ಹೋಗಿದ್ನಂತೆ. ಎಲ್ರಿಗೂ ಗನ್  ತೋರಿಸಿ ಹೇಳಿದ್ನಂತೆ - `ನೋಡಿ, ನಾನಿಲ್ಲಿ ಬಂದಿರೋದು, ದುಡ್ಡು ಅಕೌಂಟ್‍ನಲ್ಲಿ ಡೆಪಾಸಿಟ್ ಮಾಡಕ್ಕೆ. SBI Life, ಮ್ಯೂಚುವೆಲ್ ಫಂಡು  ಅಂದ್ರೋ, ಕೊಂದ್ಹಾಕಿ ಬಿಡ್ತೀನಿ!’ ಅಂತ.  ಅಪ್ಪಾ  ದುಶ್ಯಾಸನ, ಪಾಪದ ಹೆಣ್ಮಗಳು, ಆಕೀನ ಬಿಟ್ಟು  ಬಿಡಪ್ಪಾ!
ದುಶ್ಯಾಸನ    :    ನೋಡು, ಆಗೋದೆಲ್ಲಾ ಒಳ್ಳೇದಕ್ಕೇ ಅಂತ ಇದಕ್ಕೇ  ಹೇಳೋದು. ಅಣ್ಣೋ  ದಯಮಾಡಿ ನೀನು SBI Life ಗೆ ಒಂದ್ಹತ್ತಿಪ್ಪತ್ತು ಕೋಟಿ ಹಾಕ್ಬಿಡಮ್ಮಾ. ನನ್ನ  target  ಅಚೀವ್ ಆಗುತ್ತೆ. ಇಲ್ಲಾ ಅನ್ಬೇಡ.
ಕೃಷ್ಣ        :    ಥತ್ತೇರಿಕಿs  ಇದ್ಯಾಕೋ ನನ್ನ ಬುಡಕ್ಕೇ ಬರ್ತಿದೆಯಲ್ಲಪ್ಪಾ! ಇದನ್ನ ನೀವ್ನೀವೇ  ನೋಡ್ಕೋಳೀಪ್ಪಾ. ನನ್ನನ್ನು ಮಧ್ಯೆ ಏಳೀಬೇಡಿ.  ನಂಗೂ SBI Life ಗೂ ತುಂಬಾನೇ ದೂರ! ದ್ರೌಪದೀ ಈ ವಿಷ್ಯದಲ್ಲಿ ನಿಂಗೆ ಸಹಾಯ  ಮಾಡಕ್ಕಾಗಲ್ಲಮ್ಮ. Sorry..         ವಸ್ತ್ರಾಪಹರಣ ಆಗಿದ್ದಿದ್ರೆ  ಕಥೇನೇ ಬೇರೆ ಇತ್ತು.  ಯೇ ಮೇರೀ ಬಸ್‍ಕೀ ಬಾತ್  ನಹ್ಞೀs!
 (ಓಡಿ ಹೋಗುತ್ತಾನೆ. ಹೋಗುತ್ತಿರಲು - ಹಿ.ಹಾ.  . . ಲುಟ್‍ಗಯೇs  ಹಂ ಲುಟ್‍ಗಯೇs. . . )
                                                                                     ------------