ಮಾತಿನ ಮರ್ಮ

ಮಾತಿನ ಮರ್ಮ

ಕವನ

ಮಾತೆ ಮುತ್ತು ಮಾತೆ ಮೃತ್ಯು

ಮಾತಿನಿಂದಲೇ ಕಳೆಯುವುದು ಹೊತ್ತು

 

ಮಾತು ಮಧುರವಾಗಿರಬೇಕು 

ಮಾತು ಮೃದುವಾಗಿರಬೇಕು

ಮಾತನಾಡಿದರೆ ಕೇಳುವಂತಿರಬೇಕು

ಮಾತಿನಿಂದಲೇ ಪ್ರೀತಿ ಮೂಡಬೇಕು

!!ಮಾತೆ ಮುತ್ತು ಮಾತೆ ಮೃತ್ಯು!!

 

ಒಡಕು ಮೂಡಿಸುವ ಮಾತು ಬೇಡ

ದ್ವೇಷ ಹುಟ್ಟಿಸುವ ಮಾತು ಬೇಡ

ಕೆಟ್ಟ ನುಡಿಗಳನ್ನು ನುಡಿಯಬೇಡ

ಕೊಟ್ಟ ಮಾತನ್ನು ತಪ್ಪಿ ನಡೆಯಬೇಡ

!!ಮಾತೆ ಮುತ್ತು ಮಾತೆ ಮೃತ್ಯು!!

 

ಮಾತಿನ ಮರ್ಮವನ್ನು ಅರಿತು ಬಾಳು

ಮಾತು ಮಾಡುವುದು ಮನಸ್ಸನ್ನು ಹಾಳು

ಮಾತೆ ನಿರ್ಧರಿಸುವುದು ನಿಮ್ಮ ತನವನ್ನು

ಮಾತೆ ತಿಳಿಸುವುದು ನಿಮ್ಮ ಗುಣವನ್ನು

!!ಮಾತೆ ಮುತ್ತು ಮಾತೆ ಮೃತ್ಯು!!

 

ಮಾತು ಸಂತಸವ ನೀಡುವಂತ್ತಿರಬೇಕು

ಮಾತು ಎಲ್ಲರನ್ನೂ ಆಕರ್ಷಿಸುವಂತ್ತಿರಬೇಕು

ಮಾತು ಗುರಿಯನ್ನು ತೋರುವಂತ್ತಿರಬೇಕು

ಮಾತು ನೊಂದ ಮನವ ಸಂತೈಸುವಂತ್ತಿರಬೇಕು

!!ಮಾತೆ ಮುತ್ತು ಮಾತೆ ಮೃತ್ಯು!!

 

ಸಜ್ಜನರಾಗುವಿರಿ ಸವಿನುಡಿಯ ನುಡಿದರೆ

ದುರ್ಜನರಾಗುವಿರಿ ಕೆಟ್ಟಮಾತನಾಡಿದರೇ

ಸಂಕಟವನ್ನು ನೀಡುವ ಮಾತನಾಡುವವರನ್ನು

ಮೆಚ್ಚುವುದಿಲ್ಲ ಆ ಶ್ರೀಮದ್ವೆಂಕಟರಮಣ ದೇವನು

!!ಮಾತೆ ಮುತ್ತು ಮಾತೆ ಮೃತ್ಯು!!

 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್