ಮಾತಿನ ಮಾಧುರ್ಯ
ಕವನ
ಲಯವುಂಟು ಚಾರಿತ್ರ್ಯವುಂಟು
ಗರ್ವವುಂಟು ಮಾಧುರ್ಯವುಂಟು
ಮಹತ್ವವುಂಟು ಮಾತಿಗೆ
ಎತ್ತಿಂದೆತ್ತಣ ಸಂಬಂಧದ ನಂಟು
ಬೆಸೆಯುವ ಸಾಧನವಯ್ಯ;
ಚಿತ್ತದೊಳಗಣ ಚಿಂತನಾಗುಟ್ಟು
ಮೆಲುಕು ಹಾಕುವ ಅಸ್ತ್ರವಯ್ಯ
ಮನಗಳ ಚಿಂತನಾಲಹರಿಗೆ
ಉತ್ತುಂಗದ ಏಣಿಯಯ್ಯ ;
ಮಾತು ಆಡಿದರೆ ಹೋಯಿತು
ಮುತ್ತು ಒಡೆದರೆ ಹೋಯಿತು
ಎಂದು ಅರಿತವರು ಸೊಲ್ಲಿದರಯ್ಯ ;
ಹಗೆಗೆ ಬಗೆಗೆ ನುಡಿಗಳೇ
ಸರಪಳಿ ಸೇತುವೆಯಯ್ಯ
ಮೂಳೆ ಇಲ್ಲದ ನಾಲಿಗೆಯ
ನುಡಿಗಳ ಮೇಲೆ ಅರಿವಿರಲಯ್ಯ ;
ಮನದ ಮಾತನ್ನು ಗಂಟಲಲ್ಲಿ
ಉದ್ಗರಿಸಿ ಭಾರ ತಣಿಸುವುದಯ್ಯ
ನೊಂದ ಮನಗಳಿಗೆ ಸಾಂತ್ವನದ
ಮಾತುಗಳೇ ಚಂದನದ ತೇರಯ್ಯ ;
ಅಸಂಖ್ಯಾ ಜನದೊಳಗೆ
ಎಣಿಸಲಾಗದ ಭಾಷೆಯುಂಟಯ್ಯ
ಹುದುಗಿರುವ ವಿಷಯಗಳು
ಚರ್ಚೆಯೊಳಗಣ ಹೊರಬರುವುದಯ್ಯ ;
ಸೃಷ್ಟಿಯೊಳಗೆ ಮಾತಿಲ್ಲದೆ
ಮೌನಿಯಾದವನ ಹೃದಯ ಭಾರವಯ್ಯ
ನಗುವನು ಚಿಮ್ಮಿಸುವ ಓಷ್ಟಕ್ಕೆ
ನುಡಿಯಿಲ್ಲದಿದ್ದರೆ ಕಳೆಯಿಲ್ಲವಯ್ಯ!!
- ಸಹನ. ಆರ್. ಎಂ, ಕೆ. ಆರ್. ಪೇಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್