ಮಾತಿಲ್ಲ ಕತೆಯಿಲ್ಲ

ಮಾತಿಲ್ಲ ಕತೆಯಿಲ್ಲ

ಕವನ

ಮಾತಿಲ್ಲ ಕತೆಯಿಲ್ಲ

ಒಂದು ಕಾಲದಲ್ಲಿ

ನಾನು

ಹೀಗೆಯೇ ಇದ್ದೆ !

ಎಂದು ಮಾತನಾಡಲು

ಕಲಿತೆನೋ ?

ಅಂದಿನಿಂದ ಇಂದಿನವರೆಗೂ

ಮಾತನಾಡುತ್ತಲೇ ಇದ್ದೇನೆ

ಎಂದು ನಿಲ್ಲುವುದೋ

ತಿಳಿಯದು ?!!

 

ಮಾತುಗಳು ಜಾಸ್ತಿ ಆದಂತೆ

ದ್ವೇಷಗಳು 

ಹುಟ್ಟಿಕೊಳ್ಳುತ್ತವೆ ಎಂಬ

ಕಲ್ಪನೆಯೂ ಇಲ್ಲದಂತೆ

ಮುಂದುವರಿಯುತ್ತಾ

ಮುತ್ತಿದ್ದೇವೆ!

ಮಳೆಯಿಂದ ಮುಳುಗಿದ

ಭೂಮಿಯಂತಾಗಿದ್ದೇವೆ!

 

ಮುನಿಸು ಹೆಚ್ಚಾದಂತೆ

ಒತ್ತಡದ ಕೆಲಸವಿರುವಂತೆ

ನಟಿಸಿ, ದೂರ ಸರಿಯುತ್ತೇವೆ

ನಮ್ಮ ಮನಸ್ಸು

ಸರಿಯಾದಂತೆ ಅವರೇ 

ನಮ್ಮ ಬಿಟ್ಟು, 

ದೂರ ಸರಿದಿರುತ್ತಾರೆ 

ಬೇಕಾ ಇದೆಲ್ಲ ಮೂರು ದಿನದ

ಬದುಕಲ್ಲಿಯೆಂದರೆ ?

ಬದುಕಲ್ಲಿ ನಾನು ನೀನು

ಎಲ್ಲರೂ ,ಒಂದಲ್ಲ

ಒಂದು ರೀತಿಯಲ್ಲಿ ಹೀಗೆ

ಹೀಗೆಯೇ ಆಗಿದ್ದಾರೆ ;

ಆಗುತ್ತಿದ್ದಾರೆ !!

***

ಒಂದೋ.....?!

ಸಂಸಾರವೇ ಹೀಗೆ

ಹೇಗೆಂದರೆ ?

ಯಜಮಾನ ಹೇಳಿದಂತೆ

ಕುಟುಂಬದ

ಉಳಿದವರು ಕೇಳಬೇಕು

ಅದರಂತೆ ನಡೆಯಬೇಕು !

ಆದರೆ, ಅದಾಗಲಿಲ್ಲವೆಂದರೆ ;

ಒಂದೋ.......?

ಯಜಮಾನನೇ , ಕುಟುಂಬ ಉಳಿಯಲು ಸದಸ್ಯರ ಮಾತಿನಂತೆ, ನಡೆಯಬೇಕು!!

 

ಹೀಗೆ ಹೀಗೆಯೇ

ಪ್ರತಿಯೊಂದರಲ್ಲೂ,

ನಡೆದರೆ... ? ಎಲ್ಲೂ ಒಳ ವಿಷಯಗಳು ಬಹಿರಂಗವಾಗದೆ

ಅಂತರಂಗದೊಳಗೆ ಉಳಿದು 

ಬಿಡುತ್ತದೆ ನಮ್ಮ ಬಾಳು ಬದುಕು ಬರಹ ಬೆಳಗುತ್ತದೆ !

 

ಹೀಗಾಗಲಿ ಹಾಗಾಗಲಿ

ಎನ್ನದೆ ಪ್ರತಿಯೊಂದರಲ್ಲೂ

ಪ್ರತಿಯೊಬ್ಬರಲ್ಲೂ ಒಗ್ಗಟ್ಟಿರಲಿ

ಅನುಭವ ಅನುಭಾವದೊಂದಿಗೆ

ಪಕ್ವವಾಗಲಿ ಶುಭವಾಗಲಿ !

 

-ಹಾ ಮ ಸತೀಶ

ಚಿತ್ರ ಕೃಪೆ : ಇಂಟರ್ನೆಟ್ ತಾಣ

 

ಚಿತ್ರ್