ಮಾತುಕತೆ..? ಪರಿಹಾರ ..?
ಭಾರತ ಪಾಕ್ ಜೊತೆಗಿನ ತೊಡಕನ್ನು ಮಾತುಕತೆ ಇಂದ ಪರಿಹಾರ ವಾಗುವಂಥದ್ದು..
ಭಾರತ ಪಾಕ್ ಜೊತೆಗಿನ ಸಮಸ್ಯೆ ಮಾತುಕತೆ ಇಂದ ಬಗೆಹರಿಸಿಕೊಳ್ಳಲಾಗುವುದು..
ಭಾರತ ಚೀನಾ ಜೊತೆಗಿನ ಅರುಣಾಚಲ ಪ್ರದೇಶದ ವಿಚಾರವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುವುದು..
ಕಾವೇರಿ ನದಿ ನೀರಿನ ವಿವಾದವನ್ನು ತಮಿಳುನಾಡಿನ ಜೊತೆ ಶಾಂತಿಯುತ ಮಾತುಕತೆ ಮೂಲಕ ಪರಿಹರಿಸಲಾಗುವುದು..
ಬೆಳಗಾವಿ,ಕಾಸರಗೋಡು ಗಡಿ ವಿವಾದಕ್ಕೆ ಮಹಾಜನ ವರದಿಯೇ ಅಂತಿಮ..
ಉಭಯ ರಾಜ್ಯಗಳ ಜೊತೆ ಮಾತುಕತೆ ಮಾಡಿ ಅದನ್ನು ಮನವರಿಕೆ ಮಾಡಿಕೊಡಲಾಗುವುದು..
ರಾಜ್ಯದ ಸಮಸ್ಯೆ ಬಗ್ಗೆ ಪ್ರಧಾನ ಮಂತ್ರಿ ಜೊತೆ ಮಾತುಕತೆ ಮಾಡಿ ವಿವರಿಸಲಾಗುವುದು..
ಸದ್ಯದ ಪಕ್ಷದೊಳಗಿನ ಸಮಸ್ಯೆಗಳ ಬಗ್ಗೆ ಪಕ್ಷದ ಹಿರಿಯರ ಜೊತೆ ಮಾತುಕತೆ ಮಾಡಿ ನಂತರ ತೀರ್ಮಾನಿಸಲಾಗುವುದು..
ಇದನ್ನ ನಾವು ಕಡೆಯ ಎಷ್ಟೋ ದಶಕಗಳಿಂದ ಕೇಳುತ್ತ ಬಂದಿದ್ದೇವೆ..
ಮುಂದೇನೂ ಕೇಳ್ತೆವಿ ಅನ್ನೋದು ವಿಶ್ವಾಸ..
ಇಂಥದೇ ಒಂದು ಮಾತುಕತೆಗೆ ಕಳುಹಿಸಿ ನಮ್ಮ ಒಬ್ಬ ಧೀರ ಹಾಗೂ ಮೇಧಾವಿ ಪ್ರಧಾನ ಮಂತ್ರಿಯನ್ನೂ ಸಹ ಕಳೆದುಕೊಂಡಿರುವೆವು..
ಕಡೀಕ ಈ ಮಾತುಕತೆ ಯೊಳಗ ಆಗೋದಾದ್ರು ಏನು..?
ಮೇಲಿನವು ಯಾಕ ಇನ್ನ ಪರಿಹಾರ ವಾಗಿಲ್ಲ..
ಮಾತುಕತೆ ಬಿಟ್ಟು ಬೇರೆ ಏನು ಪರಿಹಾರ ಇದೆಯೇ?
ನಾವು ಈ ರೀತಿ ಕೇಳುವುದನ್ನೇ ಅಭ್ಯಾಸ ಮಾಡಿಕೊಬೇಕೇನು?
ಇಂದಿನ ಮಾತುಕತೆ ಸುದ್ದಿ:
ಹೊಗೆನಕಲ್ ವಿವಾದವನ್ನು ತ.ನಾಡು ಜೊತೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ರಾಜ್ಯ ಸರಕಾರ ಉತ್ಸುಕವಾಗಿದೆ..