ಮಾತುಗಳ ನಡುವಿನ ಮೌನ...

ಮಾತುಗಳ ನಡುವಿನ ಮೌನ...

ಬರಹ

ಸಾಯಲಾರೆ ನಾನು ನಿನ್ನ ನಾ ಪ್ರೀತಿಸುವವರೆಗು...

ಎನ್ನ ಹೃದಯದಿ ನಾಟಿರುವ ಚೂರಿಯು ಎನಗೆ ಮಲ್ಲಿಗೆಯ ಹಾಗೆ ಕೇಳೇ ಹೂವೆ...

ನಿನ್ನ ಮೋಸಕ್ಕೆ ಕ೦ಗಾಲಾಗಿ ನಾನು ಕಣ್ಣೀರಿಡುವುದಿಲ್ಲ...

ವೇದನೆಯ ದಳ್ಳುರಿಯು ಎನಗೆ ತ೦ಗಾಳಿಯಾಗಿ ತಟ್ಟಿದೆ ಕೇಳೇ ನೋವೆ...

ಸುಖ ಶಾ೦ತಿ ಎಲ್ಲಿಹುದು ಅದ ನಾನು ಕಾಣಲಿಲ್ಲ...

ಶಶಿ ಕಾ೦ತಿಯಲ್ಲಿ ನಿನ್ನ ಚೆಲುವ ನೋಡಿ ಅರಿತೆನು ಕೇಳೇ ಸಿರಿಯೇ...

ನಿನ್ನ ಮಾತುಗಳ ನಡುವೆ ಕೂತ ಮೌನವೀಗ ಕೇಳಿಸುತಿದೆ...

ಹನಿ ಮಳೆಯೋ ಇಲ್ಲ ಬರಸಿಡಿಲೋ ಅರಿಯೆ ನಾನು...

ಎನ್ನ ಹೃದಯದಿ ನವಿಲೊ೦ದು ಗರಿ ಗೆದರಿ ಕುಣಿಯಿತ್ತಿದೆ...