Skip to main content
Test
ಕವನ
ಮಾತು ಮಾತು
ಹೂತು ಹೋದ
ಹಾಗೆ ನನ್ನ ಬದುಕಿದು
ಪ್ರೀತಿ ಉಡುಗೆ
ತೊಡುಗೆ ತಂದ
ಪ್ರೇಮ ಮಧುರ ತನುವಿದು
ಹರುಷ ಕಂಡ
ಒಲವು ಚೆಲುವು
ಮೌನ ಮುರಿದು ಹಾಡಿದೆ
ತತ್ವ ನೂರು
ಕಲಿತ ಬಗೆಗೆ
ನವ್ಯ ಹುಟ್ಟು ಕಂಡಿದೆ
ಚಿಂತೆ ಬರದ
ಚಿತ್ತ ಅಮರ
ಕನಸ ನನಸು ತೇಲಿದೆ
ಮನದ ಮನನ
ಬಾಳು ತನನ
ಬಿಡದೆ ಸವಿದು ಸಾಗಿದೆ
-ಹಾ ಮ ಸತೀಶ