ಮಾತೃತ್ವ

ಮಾತೃತ್ವ

ಕವನ

ಗೂಟದಲಿ ಬಿಗಿದಿರುವ ಹಸುವೊಂದು

ತನ್ನ ಪ್ರತಿರೂಪವ ಬುವಿಗಿಳಿಸಿತು

ಮಾತೃತ್ವದ ಸಕಲ ಋಣಾನುಬಂಧ

ಮನುಷ್ಯರಂತೆ  ನಿನ್ನ ಪ್ರೇಮಾನು

ಬಂಧ//

 

ಸೊಪ್ಪು ಬೈಹುಲ್ಲಿನ ಹಾಸು

ಪುಟ್ಟ ಕರುವಿನ ಹಾಸಿಗೆ

ತನ್ನ ಕಂದನ ಹಿತವಾಗಿ ನೆಕ್ಕುತ

ದೇಹಕ್ಕೆ ಕಸುವನ್ನು ನೀಡುತ//

 

ದೊಡ್ಡ ತಟ್ಟೆಯಲಿ ಇರುವುದು ಬೂಸ

ಬೇಡವಾಯಿತು ಕಾಮಧೇನುವಿಗೆ

ಹಾಲಕುಡಿ ಏಳು ಕರುಳಕುಡಿ

ಎಂದು ಧೈರ್ಯವ ತುಂಬಿತು//

 

ಹಳ್ಳಿ ಮನೆಯ ಚೆನ್ನ ಹಟ್ಟಿ

ತಾಯಿ ಕರುವಿನ ವಾಸವು

ಮುಕ್ಕೋಟಿ ದೇವರ್ಕಳ ವಾಸ

ಹೇಳುವೆ ವಂದೇ ಗೋಮಾತರಂ//

 

-ರತ್ನಾ ಕೆ.ಭಟ್,ತಲಂಜೇರಿ

 

ಚಿತ್ರ್