ಮಾಧ್ಯಮಕ್ಕೆ ಮೋದಿ ಕಲಿಸಿದ ಪಾಠ

ಮಾಧ್ಯಮಕ್ಕೆ ಮೋದಿ ಕಲಿಸಿದ ಪಾಠ

ಮೊದಲೆಲ್ಲ ಪ್ರಧಾನಿಗಳು ವಿದೇಶ ಪ್ರವಾಸ ಹೊರಟಾಗ ಸರ್ಕಾರದ ಖರ್ಚಲ್ಲೆ ತಮ್ಮ ಜೊತೆ ೨೦ ರಿಂದ ೩೦ ಪತ್ರಕರ್ತರ ತಂಡವನ್ನು ಕರೆದುಕೊಂಡು ಹೋಗುತ್ತಿದ್ದರು.ಆದರೆ ಮೋದಿಜಿ ಬಂದ ಮೇಲೆ ಇದಕ್ಕೆ ತಿಲಾಂಜಲಿ ಹಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಹಣ ಅನಾವಶ್ಯಕ ಪೋಲಾಗುವುದನ್ನು ತಡೆದಿದ್ದಾರೆ.ಕೆಲವು ಪತ್ರಕರ್ತರು ಮೋದಿಜಿ ಭೂತಾನ್,ನೇಪಾಳ, ಬ್ರೆಜಿಲ್, ಜಪಾನ್ ಗೆ ಪ್ರವಾಸ ಹೋದಾಗ ತಮ್ಮನ್ನು ಕರೆದುಕೊಂಡು ಹೋಗುತ್ತಾರೆಂದು ಜೊಲ್ಲು ಸುರಿಸಿಕೊಂಡು ಕೂತಿದ್ದರು.ಕೊನೆ ಪಕ್ಷ ಅಮೆರಿಕ್ಕಕಾದರು ಕರೆದೊಯ್ಯುವರು ಎಂಬ ಆಸೆ ಇಟ್ಟುಕೊಂಡಿದ್ದರು.ಆದರೆ ಮೋದಿ ಸರ್ಕಾರದ ಕೆಲವು ಅಧಿಕೃತ ಪತ್ರಕರ್ತರನ್ನಷ್ಟೆ ತಮ್ಮ ಜೊತೆ ಕರೆದೊಯ್ಯಿದಿದ್ದಾರೆ.ಪರಿಣಾಮ ಈ ಆಸೆ ಬುರುಕರು ತಮ್ಮ ಸ್ವಂತ ಹಣದಲ್ಲೆ ಅಮೆರಿಕಾಕ್ಕೆ ಸುದ್ದಿ ಸಂಗ್ರಹಿಸಲು ತೆರಳಿದ್ದಾರೆ.ಟೈಮ್ಸ್ ನೌ ನ ಅರ್ನಾಬ್ ಗೋಸ್ವಾಮಿ, ಹೆಡ್ ಲೈನ್ಸ್ ಟುಡೇ ಯ ರಾಹುಲ್ ಕನ್ವಲ್,ಸಿಎನ್ ಎನ್ ಐಬಿನ್ ನ ಮಾಜಿ ಸಂಪಾದಕ ರಾಜ್ದೀಪ್ ಸರ್ದೇಸಾಯಿ, ಎನ್ ಡಿ ಟಿ ವಿಯ ಬರ್ಖದತ್ತ್ ಇವರಲ್ಲಿ ಪ್ರಮುಖರು.ಮೋದಿ ನಿಷ್ಠುರವಾದಿ.ಅವರು ಯಾರ ಓಲೈಕೆಯನ್ನು ಮಾಡುವವರಲ್ಲ.ಇದೇ ಕಾರಣಕ್ಕೆ ಮಾಧ್ಯಮ ಮೋದಿಯನ್ನುದಶಕದಿಂದ ದ್ವೇಷಿಸುತ್ತ ಬಂದಿತ್ತು.

ಮಾಧ್ಯಮ ಸಮಾಜಕ್ಕೆ ಪಾಠ ಹೇಳುತ್ತದೆ. ಆದರೆ ಮೋದಿಯಿಂದ ಮಾಧ್ಯಮ ಕಲಿಯಬೇಕಾದ ಪಾಠ ಸಾಕಷ್ಟಿವೆ.