ಮಾನವನ ಸನ್ಮಿತ್ರ - ಡಾಲ್ಫಿನ್

ಮಾನವನ ಸನ್ಮಿತ್ರ - ಡಾಲ್ಫಿನ್

ಕಳೆದ ವಾರ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಜ್ ವಿಲ್ಮರ್ ಸ್ಪೇಸ್ ಕ್ರ್ಯೂ ನ ‘ಡ್ರಾಗನ್ ಕ್ಯಾಪ್ಸ್ಯೂಲ್’ ನಲ್ಲಿ ಫ್ಲೋರಿಡಾ ಕಡಲಿನಲ್ಲಿ ಇಳಿದಾಗ ತಕ್ಷಣವೇ ಸುತ್ತುವರಿದದ್ದು ಡಾಲ್ಫಿನ್ ಗಳು. ಇವು ತಿಮಿಂಗಿಲದಂತೆ ಮಾನವನನ್ನು ಬೇಟೆಯಾಡಲು ಬಂದಿರಲಿಲ್ಲ. ಯಾರೋ ಆಪತ್ತಿನಲ್ಲಿದ್ದಾರೆ ಎಂದು ತಿಳಿದು ರಕ್ಷಿಸಲು ಬಂದಿದ್ದವು. ಡಾಲ್ಫಿನ್ ಗಳು ಸಮುದ್ರದಲ್ಲಿ ಹಾಗೂ ಸಿಹಿನೀರಿನ ನದಿಗಳಲ್ಲಿ ಕಂಡು ಬರುತ್ತವೆ. ಇವು ಹಲವಾರು ಬಾರಿ ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಗಳನ್ನು ಬದುಕಿಸಿದ್ದೂ ಇದೆ. ಮಾನವನ ಜೊತೆ ಇದು ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ವಿಶಿಲ್ ಹಾಕುವುದರ ಮೂಲಕ ವಿವಿಧ ಸಂಜ್ಞೆಗಳ ಮುಖಾಂತರ ಸಂವಹನ ನಡೆಸುತ್ತದೆ. ಈ ಮೂಲಕ ಮಾನವನ ಸನ್ಮಿತ್ರ ಎಂದು ಕರೆಯಿಸಿಕೊಂಡಿದೆ. ಈ ಡಾಲ್ಫಿನ್ ಗಳ ಕೆಲವೊಂದು ಅಪರೂಪದ ವಿಷಯಗಳು ಇಲ್ಲಿವೆ…

* ಅರ್ಜೇಂಟೀನಾದಲ್ಲಿ ಡಸ್ಕಿ ಡಾಲ್ಫಿನ್ಸ್ (Dusky Dolphin) ಗಳೆಂಬ ಪ್ರಬೇಧವು ಕಾಣಸಿಗುತ್ತವೆ. ಭಾರತದ ಗಂಗಾ ನದಿಗಳಲ್ಲಿ ಅಪರೂಪದ ಸಿಹಿನೀರಿನ ಡಾಲ್ಫಿನ್ ಗಳು ಕಾಣಸಿಗುತ್ತವೆ. ಈ ಜೀವಿಗಳನ್ನು ಭಾರತದ ರಾಷ್ಟ್ರೀಯ ಜಲಚರಗಳೆಂದು ಕರೆಯಲಾಗಿದೆ. ಕೇರಳ ಹಾಗೂ ಅಂಡಮಾನ್ ದ್ವೀಪಗಳಲ್ಲೂ ಡಾಲ್ಫಿನ್ ಗಳು ನೋಡ ಸಿಗುತ್ತವೆ. 

* ಡಾಲ್ಫಿನ್ ಗಳ ಮರಿಗಳನ್ನು ಕಾಲ್ವ್ಸ್ (Calves)ಎಂದೂ, ಗಂಡು ಡಾಲ್ಫಿನ್ಸ್ ಗಳನ್ನು ಬುಲ್ಸ್ (Bulls) ಎಂದೂ, ಹೆಣ್ಣು ಡಾಲ್ಫಿನ್ಸ್ ಗಳನ್ನು ಕೌಸ್ (Cows) ಎಂದೂ ಕರೆಯುತ್ತಾರೆ.

* ಎಲ್ಲರೂ ಅಂದುಕೊಂಡಂತೆ ಡಾಲ್ಫಿನ್ ಮೀನು ಅಲ್ಲ. ಅವುಗಳು ಸಸ್ತನಿಗಳು. ‘ಡಾಲ್ಫಿನ್’ ಎಂಬ ಪದವು ಗ್ರೀಕ್ ಭಾಷೆಯದ್ದಾಗಿದ್ದು ಅದರ ಅರ್ಥ ‘ಗರ್ಭದೊಂದಿಗಿರುವ ಮೀನು’ (Fish with a womb). ನೀರಿನಲ್ಲಿ ಈಜಾಡಿಕೊಂಡಿದ್ದರೂ ಡಾಲ್ಫಿನ್ ಮೀನಿನ ಜಾತಿಗೆ ಸೇರದೇ ಸಸ್ತನಿಗಳಾಗಿವೆ.

* ಡಾಲ್ಫಿನ್ ಗಳು ಈಜಾಡುವಾಗ ಧ್ವನಿಗಳನ್ನು ಹೊರಡಿಸುತ್ತವೆ. ಇದರಿಂದ ಮೂಡುವ ಪ್ರತಿಧ್ವನಿಗಳ ಮೂಲಕ ತಮ್ಮ ದಾರಿಯನ್ನು ಕಂಡುಕೊಳ್ಳುತ್ತವೆ. ಪ್ರತಿಧ್ವನಿಗಳನ್ನು ಆಲಿಸುವುದರ ಮೂಲಕ ಎದುರುಗಡೆಯಿರುವ ವಸ್ತುವಿನ ಗಾತ್ರದ ಬಗ್ಗೆಯೂ ಅದು ತಿಳಿದುಕೊಳ್ಳುತ್ತದೆ.

* ನೀರಿನಲ್ಲೇ ವಾಸವಾಗಿದ್ದರೂ ಡಾಲ್ಫಿನ್ ನೀರನ್ನು ಸೇವಿಸುವುದಿಲ್ಲ. ತಾನು ತಿನ್ನುವ ಮೀನುಗಳಿಂದ ಮತ್ತು ಇತರೆ ಆಹಾರಗಳಿಂದ ಅದು ತೇವಾಂಶವನ್ನು ಪಡೆದುಕೊಳ್ಳುತ್ತದೆ.

* ಡಾಲ್ಫಿನ್ ಗಳಿಗೆ ಸೊಗಸಾದ ಹಲ್ಲುಗಳಿದ್ದರೂ ಅದನ್ನು ಅವುಗಳು ಜಗಿಯಲು ಬಳಸುವುದಿಲ್ಲ. ಅವು ನೇರವಾಗಿ ತಮ್ಮ ಆಹಾರವನ್ನು ನುಂಗುತ್ತವೆ.

* ಡಾಲ್ಫಿನ್ ನ ಬಾಲದಲ್ಲಿರುವ ಸ್ನಾಯುಗಳು ಅದರ ಈಜುವಿಕೆಯ ವೇಗವನ್ನು ವೃದ್ಧಿಸುತ್ತವೆ. ಡಾಲ್ಫಿನ್ ಗಳು ಗಂಟೆಗೆ ೨೦ ಮೈಲು ವೇಗದಲ್ಲಿ ಈಜಬಲ್ಲವು. ಇದರಿಂದಾಗಿ ಅವುಗಳು ಬಹು ಬೇಗನೇ ನಿರ್ಧರಿತ ಸ್ಥಳಕ್ಕೆ ತಲುಪುತ್ತವೆ.

* ಡಾಲ್ಫಿನ್ ಗಳ ಗರ್ಭಾವಸ್ಥೆಯ ಅವಧಿ ೧೧ ರಿಂದ ೧೭ ತಿಂಗಳು. ಈ ವ್ಯತ್ಯಾಸ ಏಕೆಂದರೆ ಡಾಲ್ಫಿನ್ ಗಳಲ್ಲಿ ಬೇರೆ ಬೇರೆ ವಿಧಗಳಿವೆ. ಈ ಕಾರಣದಿಂದ ಬೇರೆ ಬೇರೆ ವಿಧದ ದಾಲ್ಫಿನ್ ಗಳಿಗೆ ಬೇರೆ ಬೇರೆ ಗರ್ಭಾವಸ್ಥೆಯ ಸಮಯ ಇರುತ್ತದೆ.

* ಡಾಲ್ಫಿನ್ ಗಳಲ್ಲಿ ಮಾವುಯಿ (Maui’s) ಎಂಬ ಜಾತಿಯವುಗಳು ಅತ್ಯಂತ ಸಣ್ಣ ಗಾತ್ರದಾಗಿರುತ್ತವೆ. ಅವುಗಳು ಕೇವಲ ೧.೫ ಮೀಟರ್ ಉದ್ದವಿರುತ್ತದೆ. ಸುಮಾರು ೫೦ ಮಿಲಿಯನ್ ವರ್ಷಗಳ ಹಿಂದಿನ ಡಾಲ್ಫಿನ್ ನ ಪಳೆಯುಳಿಕೆ ಪತ್ತೆಯಾಗಿದೆಯಂತೆ.

(ಅನುವಾದಿತ)

ಚಿತ್ರ ಕೃಪೆ: ಅಂತರ್ಜಾಲ ತಾಣ