ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............

ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............

ಕವನ

ಗಾಳಿ ಪಟ :


ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು !
ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ !
ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ  ತಾ ಹಾರಾಡುತ !
ಮನುಜನಿಗೆ ದೇವನೆಡೆ ದಾರವದು ನಂಬಿಕೆಯು ಮನುಜತಾ ಪಟವೆಂದು ತಿಳಿಸಿ ಹೇಳಿ  !
ನಂಬಿಕೆಯು ಸಾಧನವು ಸಂತಸದಿ ಬಾಳಲು ಉಳಿದ ಸಂತಸವೆಲ್ಲ ದೈವ ಕ್ರುಪೆಯು -
ಜೀವನವು ಬಾನಂತೆ ಮೈದಾನದಾ ತೆರದಿ
ದೇವ ನೊಲುಮೆಯ ಪಡೆವ ತಾ ಸುಖಿಸುವ !!


ಇಂತು
ಅಪ್ರಮೇಯ ಶರ್ಮ

 

Comments