ಮಾನ ಕಳೆದುಕೊಂಡ ಅಮೆರಿಕಾದ ಲೆಹಮಾನ್ ಬ್ರದರ್ಸ್ ಬ್ಯಾಂಕ್

ಮಾನ ಕಳೆದುಕೊಂಡ ಅಮೆರಿಕಾದ ಲೆಹಮಾನ್ ಬ್ರದರ್ಸ್ ಬ್ಯಾಂಕ್

ಬರಹ

1850ರಲ್ಲಿ ಸ್ಥಾಪಿತವಾದ ಅಮೆರಿಕಾದ ದೊಡ್ಡ ಹೂಡಿಕೆ ಬ್ಯಾಂಕ್ ದಿವಾಳಿ ಎದ್ದಿದೆ. ಜರ್ಮನಿಯ ವಲಸೆ ಬಂದ ಹೆನ್ರಿ ಲೆಹಮಾನ್,ಈಮಾನುವೆಲ್ ಮತ್ತು ಮೇಯರ್ ಇದನ್ನು ಸ್ಥಾಪಿಸಿದ್ದರು. ದಿವಾಳಿಗೆ ಕಾರಣ? ಬೇಕಾಬಿಟ್ಟಿ ಮನೆಸಾಲ ಕೊಟ್ಟದ್ದು- ಸಾಲಗಳಿಗೆ ಸರಿಯಾದ ಅಸ್ತಿ ಅಡಮಾನು ಹೊಂದಿರದಿದ್ದುದು. ಈ ಸಾಲಗಳ ಮೇಲೆ ಮತ್ತೆ ಸಾಲ ಮಾಡಿ,ಇತರೆಡೆ ಹೂಡಿಕೆ ಮಾಡಿದ್ದು-ಒಟ್ಟಿನಲ್ಲಿ ಅಶಿಸ್ತಿನ ವ್ಯವಹಾರಬ್ಯಾಂಕು ದಿವಾಳಿ ಆಗಲು ಹೇತುವಾಯಿತು.

ಈ ಬ್ಯಾಂಕು ಭಾರತದಲ್ಲೂ ವ್ಯವಹಾರಗಳನ್ನು ಹೊಂದಿತ್ತು. ಸುಮಾರು ಎರಡೂವರೆ ಸಾವಿರ ಜನ ಉದ್ಯೋಗಿಗಳಿದ್ದರು. ಈಗವರು ಕೆಲಸ ಕಳೆದು ಕೊಳ್ಳುವುದು ಖಾತರಿ. ಭಾರತೀಯ ಕಂಪೆನಿಗಳ ಶೇರುಗಳನ್ನು ಖರೀದಿಸಿದ ಬ್ಯಾಂಕ್, ಇತ್ತೀಚೆಗಿನ ಶೇರು ಮಾರುಕಟ್ಟೆಯ ಕುಸಿತದಿಂದ ಭಾರೀ ನಷ್ಟ ಅನುಭವಿಸಿತ್ತು. ಕಳೆದ ಒಂದು ತಿಂಗಳಿನಿಂದ ಐನೂರು ಕೋಟಿ  ರುಪಾಯಿ ಬೆಲೆಯ ಶೇರುಗಳನ್ನು ಮಾರಾಟ ಮಾಡಿದ ಕಂಪೆನಿ ತುಸುವಾದರೂ ನಷ್ಟವನ್ನು ಕಡಿಮೆ ಮಾಡಿಕೊಂಡಿತು.ಎರಡು ಸಾವಿರ ಕೋಟಿ ರುಪಾಯಿ ಹೂಡಿಕೆ  ಹಿಂದೆಗೆಯಲ್ಪಡುವ ಸಂಭವವಿದೆ.

ವಿವರಗಳು