ಮಾಮರನಂದನ

ಮಾಮರನಂದನ

ಕವನ

 **ಮಾಮರನಂದನ**

 
ರಾಜಾಧಿರಾಜ
ರಾಜ ಮಾರ್ತಾಂಡ
ಸ್ವಾಧಿಷ್ಟ ಪ್ರಚಂಡ
ರಸರುಚಿ ವೀರ
ಸುಗಂಧ ಶೂರ
ಫಲರಾಜ್ಯ ಸಾಂಮ್ರಾಟ
ಸವಿಭೋಜ್ಯ ಶ್ರೇಷ್ಟ
ಸುರಸುಂದರಾಂಗ
ಶ್ರೀ ಶ್ರೀ ಶ್ರೀ ಮಾಮರನಂದನ ಬಹುಪರಾಗ್, ಬಹುಪರಾಗ್, ಬಹುಪರಾಗ್.
 
ವಸಂತಮಾಸದಂಗಳಕೆ ಮಾವಿಗೆ 
ತುಂಬುಹೃದಯ ಸ್ವಾಗತ
ಸ್ವಾಧಿಷ್ಟ ತಿರುಳದೊಡೆಯನಿಗೆ 
ಮನೆ ಮನೆಯಲಿ ಸುಸ್ವಾಗತ
 
ಘಮಘಮಿಸುವ ಪರಿಮಳವ ಸೂಸುತ,
ಬಗೆ ಬಗೆಯ ಬಣ್ಣವೆರೆಚುತ,
ತೋಟದೇಶ ಗಡಿಯ ದಾಟಿ,
ಬಯಲ ಸೀಮೆನರಸಿ ಮಾವು ಬಂದಿಹನು.
 
ಕೆಂಪು, ಕೇಸರಿ, ಹಳದಿ ವರ್ಣತೊಟ್ಟು,
ಗಾಜಿನ ನಯ ಛವಿಯನುಟ್ಟು,
ಗಾಡಿ ಮೇಲೆ, ತಲೆಯ ಮೇಲೆ,
ಮೆರವಣಿಗೆಯ ಮೆರೆದಿಹನು.
 
ಬಾದಾಮಿ, ಮಲ್ಲಿಗೆ, ಬಂಗಪಲ್ಲಿ,
ಮಲಗೋಬ, ರಸಪುರಿಯ ತಿರುಳಿನಲ್ಲಿ,
ರುಚಿ ರುಚಿಯ ರಸವ ತುಂಬಿ,
ಬೀದಿಗಳಲಿ ಕಂಗೊಳಿಸಿಹನು.
 
ನಾಸಿಕದೊಲ್ಲೊಮ್ಮೆ ಫಲವ ಮೂಸಿ,
ಬಾಯಲ್ಲಿ ರುಚಿಗೆ ಜೊಲ್ಲು ಸೂಸಿ,
ಸಿಪ್ಪೆ ಸುಳಿದು, ತಿರುಳ ಮೊಗೆದು ತಿಂದರೆ..!!!
ಸ್ವರ್ಗವನೆ ಧರೆಗಿಳಿಸುವನು.
 
- ಚಂದ್ರಹಾಸ

Comments