ಮಾಯದ ಮದುವೆ

ಮಾಯದ ಮದುವೆ

ಕವನ

ವಧುವಿನ ಸಂಗಡ ಮದುಮಗ ನಡೆದನು

ಮಧುವಿನ ಚೆಲುವಿನ ಸಡಗರ ರೀತಿಲಿ

ಚದುರೆಯು ನಡೆಯುವ ಮೋಹಕ ನಡಿಗೆಗೆ ಸೋಲುತ ಶಶಿಕುವರ

ಕದಿರೆಯ ತರದಲೆ ನೀರೆಯು ನಲಿದಿರೆ

ಬದುವಿನ ತುಂಬಾ ಪುಷ್ಪಗಳರಳಿತು

ಮಧುರದ ಭಾವನೆ ಸೇರುತ ಬರಲದು ನಾಚುತ ವಧುವರರು

 

ಮಾಯದ ಕಿನ್ನರಿ ನುಡಿಸುತ ಬಂದನು

ಕಾಯಕವೆನುತಲೆ ಸಂಭ್ರಮ ಪಡುತಲಿ

ನೋಯುವ ಭಾವನೆ ಯಾರೊಳು ಕಾಣದೆ ಸಂತಸ ತುಂಬಿತು ಉತ್ಸವದಿ

ಕಾಯುವ ಕೆಲಸವು ಜೀವನ ಜೊತೆಯಲಿ

ಹಾಯದೆ ಹಾರದೆ ಬರಲದು ನಿರತವು

ಮಾಯಕ ಶೋಭಿತ ಹತ್ತಿರ ನುಸುಳದೆ ದುರ್ಗುಣ ಬರದಿರಲಿ

 

ಬಾಧೆಯು ಬರದೆಲೆ ಸೌಖ್ಯವು ತುಂಬಲಿ

ಸಾಧನೆ ಶಿಖರವ ಮುಟ್ಟುತ ಹಾಡಲಿ

ವಾದವ ಮಾಡದೆ ಶಾಂತಿಯ ಪಡೆಯುತ ಜೋಡಿಯು ಸುಖದಿಂದ

ನಾದದ ಪಲ್ಲವಿ ಸುತ್ತಲು ಹರಡಲು

ಮೇದಿನಿ ನಗುತಲಿ ಹರಸುತ ನಡೆದಳು

ಹಾದಿಯ ಸವೆಸುತ ಬದುಕಲಿ ಬಾಳುತಲಿದ್ದರು ಮುದದಿಂದ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಕಶ್ವಿ ಇವೆಂಟ್ ಮ್ಯಾನೇಜಮೆಂಟ್

 

ಚಿತ್ರ್