ಮಾಯಾಚಿತ್ರ
ಕವನ
ಕ್ಯಾಮರ ಕಣ್ಣಲ್ಲಿ
ಕ್ಲಿಕ್ ಎನ್ನುವ ಶಬ್ದ
ಸ್ಮೈಲ್ ಪ್ಲಿಸ್ ಆಲ್
ಎಂದು ಒಂದು ಕ್ಷಣ
ಕ್ರಾಪುತಿದ್ದುತ ನಿಲ್ಲುವದು
ಅಲುಗಾಡದಂತೆ....||
ತುಟಿಗೆ ಬಣ್ಣಹಚ್ಚಿ
ಲೈಟನ ಬೆಳಕಲ್ಲಿ
ಛಾಯದೆದುರಿಗೆ ನಿಂತು
ಹಲ್ಲು ಕಿರಿದು
ಕಣ್ಣು ಮಿಟುಕಿಸದಂತೆ
ಛಾಯಾಚಿತ್ರಕ್ಕೆ
ನಿಲ್ಲುವ ಪರಿ ಅದ್ಬುತ..||
ಅವನ ಮಾತಿಗೆ
ತಲೆಯಾಡಿಸಿ
ವರ್ಣಚಿತ್ರದಲ್ಲಿ
ಮುಗುಳು ನಗೆಯ
ವದನಾರವಿಂದದಲ್ಲಿ
ನಮ್ಮ ಭಾವಚಿತ್ರವೆಂಬ
ಹರ್ಷದ ಮನೋಲ್ಲಾಸ...||
ಸರಿದು ನಿಲ್ಲಿ
ಎಡಕ್ಕೆ ಸರಿಯಿರಿ
ಮುಂದೆ ಬನ್ನಿ
ಸ್ವಲ್ಪ ಮುಖವೆತ್ತಿ
ಈಗ ಡನ್ ಓಕೆ...!
ಎಂಬ ಉದ್ಘಾರ
ನುಡಿಗೆ ಬದ್ದರಾಗಿ
ತಗೆವ ಚಿತ್ರವೆ ಛಾಯಾಚಿತ್ರ
ಅಲ್ಲ ಮಾಯಾಚಿತ್ರ..||
-*ಶಂಕರಾನಂದ ಹೆಬ್ಬಾಳ*
ಚಿತ್ರ: ಗೂಗಲ್
ಚಿತ್ರ್