ಮಾರುವೇಷದ ಗಾಯಕ !

ಮಾರುವೇಷದ ಗಾಯಕ !

ಮಾರು ವೇಷದಲ್ಲಿ ಶರಣ್​ !.ಗಾಂಧಿ ಬಜಾರ್​ ಸುತ್ತ-ಮುತ್ತ ಶೂಟಿಂಗ್ !12 ಕ್ಯಾಮೆರಾ ಬಳಸಿ ಚಿತ್ರೀಕರಣ !ರವಿಶಂಕರ್ ಮೇಲೆ ಈ  ಹಾಡು ಚಿತ್ರಿತ!ಇದು ನಾಯಕ ಪರಿಯಿಸೋ ಹಾಡು .ಚಿತ್ರದಲ್ಲಿ ರವಿಶಂಕ್ ಮಾಡ್ತಾರೆ ಆ ಕೆಲಸ  ಅನೂಪ್​ ಸಂಗೀತ-ಪವನ್ ಸಾಹಿತ್ಯ. ನಟರಾಜ ಸರ್ವಿಸ್ ಚಿತ್ರದ ಹೊಸ ಐಡಿಯಾ.    
------
ಒಂದು ರೋಡ್. ಪಕ್ಕದಲ್ಲಿ ಗಾಯಕ. ಹಾರ್ಮೋನಿಯಂ ಮತ್ತು ತಮಟೆ ಸಾಥ್ ಬೇರೆ. ಹೋಗೋರಿಗೆ.ಬರೋರಿಗೆ ಈ ಗಾಯಕ ಯಾರು..? ಎಂಬ ಪ್ರಶ್ನೆ. ಧ್ವನಿ ಕೇಳಿದರೆ ಎಲ್ಲೋ ಕೇಳಿದ ನೆನಪು. ಅದು ಯಾರು ಅನ್ನೋದನ್ನ ನಾವು ಹೇಳೊದಿಲ್ಲ. ಬನ್ನಿ, ನೀವೇ ಓದಿ.

ಮಾರು ವೇಷದಲ್ಲಿ ಶರಣ್​ !
ಶರಣ್ ಹಾಡುಗಾರ. ರೋಡ್ ಸೈಡ್ ಕುಳಿತು ಹಾಡಿರೋದು ವಿಶೇಷ. ಚಿತ್ರಕ್ಕೆ ಇದು ಹೊಸ ಪ್ರಚಾರ ತಂತ್ರ. ಐಡಿಯಾ ಮಾಡಿದ್ದು ನಿರ್ದೇಶಕ ಪವನ್. ಚಿತ್ರದ ಹೆಸರು ನಟರಾಜ ಸರ್ವಿಸ್.

ಗಾಂಧಿ ಬಜಾರ್​ ಸುತ್ತ-ಮುತ್ತ ಶೂಟಿಂಗ್ !
ಹೌದು ! ಹನುಮಂತ್​ ನಗರ ಮತ್ತು ಗಾಂಧಿ ಬಜಾರ್ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ. ಈಗ ಎಟಿಡಿಂಗ್ ಕೆಲಸವೂ ನಡೀತಿದೆ.

12 ಕ್ಯಾಮೆರಾ ಬಳಸಿ ಚಿತ್ರೀಕರಣ !
ಹಿಡನ್ ಕ್ಯಾಮೆರಾ ಬಳಸಿಕೊಂಡೇ ಹಾಡು ಚಿತ್ರಿಕರಿಸಲಾಗಿದೆ. ಇದು ಚಿತ್ರದಲ್ಲಿ ಇರುತ್ತದೆಯೋ ಇಲ್ಲೋ ಗೊತ್ತಿಲ್ಲ.ಆದರೆ, ಈ ಹಾಡು ಚಿತ್ರದಲ್ಲಿ ಬಳಕೆ ಆಗುತ್ತಿದೆ.

ರವಿಶಂಕರ್ ಮೇಲೆ ಈ  ಹಾಡು ಚಿತ್ರಿತ!
ನಟರಾಜ ಸರ್ವಿಸ್ ಚಿತ್ರದಲ್ಲಿ ರವಿಶಂಕರ್ ಈ ಗೀತೆ ಹಾಡಲಿದ್ದಾರೆ. ಇದರ ವಿಶೇಷ ಸೂಪರ್ ಆಗಿದೆ. ಹೀರೋನನ್ನ ಗುಣಗಾನ ಮಾಡೋದು ಈ ಹಾಡಿನ ಸ್ಪೆಷಾಲಿಟಿ. ಇಲ್ಲಿ ನಾಯಕ ಶರಣ್ ಬರೋದಿಲ್ಲ. ರವಿಶಂಕರ್ ನಟರಾಜನನ್ನ ಪರಿಚಯಿಸುತ್ತಾರೆ. ಅನೂಪ್ ಸಂಗೀತ ಕೊಟ್ಟಿರೋ ಈ ಗೀತೆಯನ್ನ ನಿರ್ದೇಶಕ ಪವನ್ ಒಡೆಯರ್ ಬರೆದಿದ್ದಾರೆ. ಹಾಡು ವೈರಲ್ ಆಗುತ್ತಿದೆ. ವೀಡಿಯೋ ಖುಷಿ ಕೊಡುತ್ತಿದೆ. ಇಡೀ ಚಿತ್ರದಲ್ಲಿ ಹೇಗಿರುತ್ತದೆ ಎಂಬ ಕುತೂಹಲ ಕೆರಳಿಸುತ್ತಿದೆ.

-ರೇವನ್ ಪಿ.ಜೇವೂರ್​