ಮಾರ್ಚ್ 23 : ವಿಶ್ವ ಹವಾಮಾನ ದಿನ

ಮಾರ್ಚ್ 23 : ವಿಶ್ವ ಹವಾಮಾನ ದಿನ

ಮಾನವನ ಸುರಕ್ಷೆ ಮತ್ತು ಕ್ಷೇಮಕ್ಕೆ ಭೌಗೋಳಿಕ ಹವಾಮಾನ ಚೆನ್ನಾಗಿರುವುದು ಅತ್ಯಂತ ಮುಖ್ಯವಾದದ್ದು. ಹವಾಮಾನ  ನೈಸರ್ಗಿಕ ವಾತಾವರಣದ ಮೇಲೆ ಮಾನವನ ಆರೋಗ್ಯಯುತ ಬದುಕು ಅವಲಂಬಿಸಿದೆ. ಹವಾಮಾನ  ಬದಲಾವಣೆಯಿಂದ ಉಂಟಾಗುವ ವೈಫರೀತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 23ರಂದು  ವಿಶ್ವ ಹವಾಮಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಹವಾಮಾನವು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವುದರಿಂದ ವಿಶ್ವದ  ಎಲ್ಲಾ ರಾಷ್ಟ್ರಗಳು ಹವಾಮಾನ ವರದಿಗೆ ಪ್ರಾಮುಖ್ಯತೆಯನ್ನು  ನೀಡುತ್ತವೆ. ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯ್ಯಗಳ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. ಈ ವರ್ಷದ ಘೋಷ ವಾಕ್ಯ "early warning and early action " ಪ್ರತಿ ವರ್ಷ ಒಂದು ಥೀಮ್ ಇಟ್ಟು ಈ ದಿನವನ್ನು ಆಚರಿಸಲಾಗುತ್ತದೆ. ಸ್ಥಳೀಯ ಹವಾಮಾನ ವಾತಾವರಣ ಮತ್ತು ನೀರಿನ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಆರಂಭಿಕ ಎಚ್ಚರಿಕೆ, ಆರಂಭಿಕ ಕ್ರಿಯೆ ಎಂಬಾ ಘೋಷ ವಾಕ್ಯವನ್ನು ಇಡಲಾಗಿದೆ. 2021ರಲ್ಲಿ ಹವಾಮಾನ ಮತ್ತು ನೀರು, 2019ರಲ್ಲಿ ಸೂರ್ಯ, ಭೂಮಿ ಮತ್ತು ವಾತಾವರಣ ಎಂಬ ಥೀಮ್ (ಘೋಷ ವಾಕ್ಯ) ಇಡಲಾಗಿತ್ತು. ಅಧಿಕ ಬಿಸಿ ಗಾಳಿ, ಬರ ಪರಿಸ್ಥಿತಿ, ಅತಿವೃಷ್ಟಿ, ಭೂಕಂಪನ ಹಾಗೂ ಅಗ್ನಿ ಪರ್ವತಗಳ ಸ್ಫೋಟ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಹವಾಮಾನ ವೈಪರೀತ್ಯವು ನಿಸರ್ಗ ಸಹಜ ಪ್ರಕ್ರಿಯೆ. ಈ ಎಲ್ಲಾ ಸಮಸ್ಯೆಗಳು ಮನುಷ್ಯ ಸೃಷ್ಟಿಗೆ ಮುನ್ನವೇ ಅದೆಷ್ಟೋ ಸಲ ಸಂಭವಿಸಿವೆ. ಈ ಹಿಂದೆ ಭೂಮಿಯ ಮೇಲಿನ ತಾಪಮಾನದಿಂದಾಗಿ ಆರು ಅಥವಾ ಐದು ಕೋಟಿ ವರ್ಷಗಳ ಹಿಂದೆ ಜೀವಿ ವೈವಿಧ್ಯವೆಲ್ಲ ನಾಶವಾಗಿದ್ದೇ ಇದಕ್ಕೆ ನಿದರ್ಶನ. ಡಾರ್ವಿನ್ ವಿಕಾಸವಾದದ ಪ್ರಕಾರ ಅಸ್ತಿತ್ವಕ್ಕಾಗಿ ಸೆಣಸಾಟ, ಸದೃಢರ ಉಳಿಕೆ ಮತ್ತು ಸಹಜ ಆಯ್ಕೆ ಎಲ್ಲವೂ ಇದರೊಂದಿಗೆ ಬೆಸೆದುಕೊಂಡಿದೆ.  ಹವಾಮಾನಕ್ಕೆ ಹೊಂದಿಕೊಳ್ಳುವ ಪ್ರಾಣಿಗಳು ಬದುಕುತ್ತವೆ ಇಲ್ಲದೆ ಇದ್ದವು ನಶಿಸುತ್ತವೆ. ಹವಾಮಾನ ಬದಲಾದಂತೆ ಮಾನವ, ಪ್ರಾಣಿ, ಪಕ್ಷಿ, ಮರಗಿಡ ಅಳಿವಿನತ್ತ ಸಾಗುತ್ತವೆ. ಮುಂದೊಂದು ದಿನ ಕಣ್ಮರೆಯಾಗುತ್ತವೆ. ಇದರ ಜೊತೆಗೆ ಮಾನವನ ದುರಾಸೆಯಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಪರಿಸ್ಥಿತಿ ಡೋಲಾಯಮಾನವಾಗುತ್ತಿದೆ.

-ಎಸ್. ನಾಗರತ್ನ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ