ಮಾಲು ಕವಿತೆಗಳು - ೩ By Maalu on Thu, 04/25/2013 - 11:13 ಕವನ ಮಾಲು ಕವಿತೆಗಳು - ೩ ಹುಡುಗಾ, ದೀಪ ಹಚ್ಚಿ ತಂದೆ ನಿನ್ನ ರೂಪ ನೋಡಲೆಂದೆ... ನೀ ರತಿಗೆ ತಕ್ಕ ಮಾರ ಬೊಗಸೆ ಹೂಗೆ ಸಿಕ್ಕ ದಾರ ಜೊತೆಗೆ ಸೇರೆ ಒಂದು ಹಾರ... ಸಗ್ಗ ಇಳೆಗೆ ಇಳಿಯಲಿಂದೆ ಆನಂದ ಪಡೆವೆನೆಂದೆ ನಿನ್ನ ಅಂಗ ಸಂಗದಿಂದೆ... ! -ಮಾಲು Log in or register to post comments