ಮಾಲು ಕವಿತೆಗಳು - ೪

ಮಾಲು ಕವಿತೆಗಳು - ೪

ಕವನ

 

ಮಾನಿನಿ... 
ಚಿಗುರೆಗಿರುವ ಚೆಂದ 
ಹಗುರ ಹೂವ ಗಂಧ 
ಬಿಗಿದು ಎದುರು ನಿಂದ 
ಮುಗುದೆ ಇವಳು ಗೆಳೆಯ!
ಮರೆಯದಂಥವಳು 
ಹೆರಳ ಕುಣಿಸುತಿರಲು 
ಮರುಕಳಿಸದೆ ಮತ್ತೆ 
ನಿನ್ನ 
ಮರೆತು ಹೋದ ಹರೆಯ!
-ಮಾಲು