ಮಾಲು ಮನದ ಮಾತುಗಳು...

ಮಾಲು ಮನದ ಮಾತುಗಳು...

ಕವನ

 

-1-

ಚೆನ್ನಿರುವುದೇ ಕೊಳವು
ನೀರಿರದಿದ್ದರೆ!
ಅಂತೆಯೇ ನಾ ಗೆಳೆಯ
ನೀನಿರದಿದ್ದರೆ!

***
-2-
ನೆಚ್ಚಿಕೆಯಿರದೆ ನನ್ನಲ್ಲಿ 
ನನ್ನ ಮೆಚ್ಚಿದವನಿವನು 
ಕೊಡುವ ಬೆಚ್ಚಗಿನ ಚುಂಬನವು 
ಮಣ್ಣು ಬೆರೆಸಿದ ಜೇನು 
***
-3-
ಹುಡುಗಾ,
ನಿನ್ನ ಎದೆಯಲಿ ನೆಟ್ಟು ಒಲವನು 
ನಾನು ನೀರ ಸುರಿದೆ ;
ಎತ್ತರದ ಮರದ ತೆರದಿ ನೀನು ಬೆಳೆದೆ ;
ಮತ್ತೆ ಬಲು ದೂರ ನಿಂತು 
ಕೈಗೆಟುಕದ ಹಣ್ಣಾಗಿ ತೊನೆದೆ;
ಕೊನೆಗೆ ಕೈಗೆ ಸಿಗದೆ 
ಬರಿ ಮನದೆ ಉಳಿದೆ !
-ಮಾಲು