ಮಾಲು ಮುತ್ತುಗಳು....
ಕವನ
-1-
ಹೊಸವರುಷದೆ ನಿನಗೆ
ಪಿಸು ಮಾತಿದು ನಲ್ಲ!
ವಯಸದು ಜಾರಿದೆಯಲ್ಲ...
ಆದರೂ
ರಂಗುಳಿಸಿಕೊಂಡಿವೆ ಇನ್ನೂ
ನನ್ನ ಚೆಂದುಟಿ, ಗಲ್ಲ!
ನಿನ್ನ ನೋಡುವ ಪುಲಕ
ನಿನ್ನ ನೋಡುವ ತವಕ
ಹಾಗೆ ಇದೆಯಲ್ಲ!
-ಮಾಲು
-2-
ಗೆಳೆಯಾ,
ವರುಷ ಬಂದರೇನು
ವರುಷ ಹೋದರೇನು
ಆ ಹರುಷ ಬಾರದಿದ್ದರೆ...
ನಿನ್ನ ಸೇರಿ ನಾನು
ಈ ಜನುಮ ಕಳೆದರೇನು
ಆ ನಿಜದ ಒಲವು
ನಮ್ಮಲಿ ಇಲ್ಲದಿದ್ದರೆ....
-ಮಾಲು