ಮಾಲು ಮುತ್ತುಗಳು...

ಮಾಲು ಮುತ್ತುಗಳು...

ಕವನ

 

ಪಿಸು ಮಾತಿದು ಗೆಳೆಯ!
ಧಗ ಧಗಿಸದೆ ಉರಿಯ
ತಿದಿ ಒತ್ತಿದ ಕುಲುಮೆ?
ನಮ್ಮಿಬ್ಬರ ಹೃದಯ
ತುಟಿಯೊತ್ತಲು ತುಟಿಗೆ
ಚಿಮ್ಮಿಸದೆ ಇರದೆ
ತುದಿ ಇಲ್ಲದ ಕುಲುಮೆ?!
            *******
ಹತ್ತಿದ್ದೇನೆ ಈಗ
ಹರಯದ ಹಡಗ
ಹುಚ್ಚು ಹೊಳೆಯಲ್ಲಿ
ತೇಲಿಸದೆ 
ಮುಳುಗಿಸುವ 
ನಾವಿಕನಾಗಿ ನೀನು
ಬರುವೆಯ ಹುಡುಗಾ?!
-ಮಾಲು 
 

Comments

Submitted by Maalu Thu, 10/18/2012 - 21:26

...ತುಟಿಯೊತ್ತಲು ತುಟಿಗೆ
ಚಿಮ್ಮಿಸದೆ ಇರದೇ
ತುದಿಯಿಲ್ಲದ ಒಲುಮೆ.
ಇರಬೇಕಿತ್ತು.
(ಇಲ್ಲಿಯೂ ಕುಲುಮೆ ಇದೆ, ಕ್ಷಮಿಸಿ)