ಮಾವನ ಮನೆವಾಸ
ಬರಹ
ಶ್ವಶುರಗೃಹನಿವಾಸೋ ಸ್ವರ್ಗತುಲ್ಯೋ ನರಾಣಾಂ
ಯದಿ ಭವತಿ ವಿವೇಕೀ ಪಂಚ ವಾ ಷಡ್ದಿನಾನಿ
ದಧಿಮಧುಘೃತಲೋಭಾನ್ಮಾಸಮೇಕಂ ವಸೇಚ್ಚೇತ್
ತದುಪರಿ ದಿನಮೇಕಂ ಪಾದರಕ್ಷಾಪ್ರಯೋಗಃ||
ಮಾವನ ಮನೆವಾಸವೋ ನರರಿಗೆ ಸ್ವರ್ಗದಂತೆ. ಆದರೆ ವಿವೇಕವುಳ್ಳ ಮನುಷ್ಯನು ಐದೋ ಆಱೋ ದಿನವಿರಬೇಕು. ಅಕಸ್ಮಾತ್ ಮೊಸರು, ತುಪ್ಪ, ಜೇನುತುಪ್ಪದ ಆಸೆಯಿಂದ ತಿಂಗಳೇನಾದರೂ ವಾಸವಾಗಿದ್ದರೆ ಅದಱ ಮೇಲೆ ದಿವಸಕ್ಕೊಂದಱಂತೆ ಮೆಟ್ಟಿನಾಗೆ ಹೊಡೆತ.:)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ