ಮಾವಿನಕಾಯಿ ಕೋಸಂಬರಿ
ಬೇಕಿರುವ ಸಾಮಗ್ರಿ
ಮೊಳಕೆ ಕಟ್ಟಿದ ಹೆಸರುಕಾಳು ೧ ಕಪ್, ಮಾವಿನಕಾಯಿ ತುರಿ ೪ ಚಮಚ, ಕ್ಯಾರೆಟ್ ತುರಿ ೩ ಚಮಚ, ತೆಂಗಿನತುರಿ ೧/೪ ಕಪ್, ಕಾಳುಮೆಣಸಿನ ಪುಡಿ ೧/೪ ಚಮಚ, ಹಸಿಮೆಣಸು ೧, ನಿಂಬೆರಸ, ೧/೨ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವಿನ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ ೧ ಚಮಚ, ಸಾಸಿವೆ ೧ ಚಮಚ, ಒಣಮೆಣಸು ೧.
ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಮಾವಿನ ತುರಿ, ಹೆಸರುಕಾಳು, ಕ್ಯಾರೆಟ್ ತುರಿ, ತೆಂಗಿನತುರಿ, ಕಾಳುಮೆಣಸಿನ ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸು ಎಲ್ಲವನ್ನೂ ಮಿಶ್ರ ಮಾಡಿ. ನಂತರ ಕರಿಬೇವು ಸೊಪ್ಪಿನ ಒಗ್ಗರಣೆ ಕೊಟ್ಟರೆ ಕೋಸಂಬರಿ ತಿನ್ನಲು ರೆಡಿ.
- ಸಹನಾ ಕಾಂತಬೈಲು, ಮಡಿಕೇರಿ