ಮಾವಿನಹಣ್ಣು ರಸಾಯನ

ಬೇಕಿರುವ ಸಾಮಗ್ರಿ
ಸಣ್ಣಗೆ ಹೆಚ್ಚಿದ ಮಾವಿನ ಹಣ್ಣಿನ ಹೋಳುಗಳು ೨ ಕಪ್, ಬೆಲ್ಲದ ಪುಡಿ ೬ ಚಮಚ, ಸಕ್ಕರೆ ೬ ಚಮಚ, ತೆಂಗಿನ ಹಾಲು ೨ ಕಪ್, ಎಳ್ಳು ೨ ಚಮಚ.
ತಯಾರಿಸುವ ವಿಧಾನ
ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು ಹಾಗೆಯೇ ಕುಡಿಯಬಹುದು. ಇಲ್ಲವೇ ಇಡ್ಲಿ, ಉದ್ದಿನ ದೋಸೆ, ಒತ್ತು ಶ್ಯಾವಿಗೆ ಜೊತೆ ಸೇರಿಸಿ ತಿನ್ನಲೂ ಬಹಳ ಚೆನ್ನಾಗಿರುತ್ತದೆ.
-ಸಹನಾ ಕಾಂತಬೈಲು, ಮಡಿಕೇರಿ