ಮಾವಿನ ಸಂಭ್ರಮ

ಮಾವಿನ ಸಂಭ್ರಮ

ಕವನ

ಹಸಿರೆಲೆ ಹೊತ್ತಿಹ ಮಾವು

ಬಸಿರ ಹೊತ್ತಾ ಸಂಭ್ರಮದಿ

ಕೊಂಬೆಗಳ ಹೊರಹೊಮ್ಮಿಸಿ

ಉಬ್ಬಿ ನಲಿಯಿತೇ ಮರವು

 

ಹೊಸ ಚೈತ್ರದಾಲಿಂಗನಕೆ

ಅರಳಿ ನೀನು ನಲಿದಿರುವೆ

ವರ್ಷದಾಂತರಿಕ ಬಯಕೆಗೆ

ನಿನ್ನೊಳರಳಿತೆ ನವಚಿಗುರು

 

ಗಾಳಿಯಲಿ ಹೊಮ್ಮಿತೇ ಗಾನ

ನಿನ್ನ ಮಧುರ ಅಮೃತಪಾನ

ಚಿಗುರದು ಒಗರು ಕಾಯಾಗಿ

ಮಾಗಿ ಹಣ್ಣಾಗಿ ನಿನ್ನ ಸಫಲತೇ

 

ಅದೇನು ಕನಸ ಕಂಡೆಯೋ

ನಿನ್ನ ಫಲ ಸಂತತಿಯ ಕಂಡು

ಪ್ರೀತಿ ಪ್ರೇಮಗಳ ಸೆರಗಿನಲಿ

ಭವಿಷ್ಯ ದುಗುಡ ಚಿಂತೆಯಲಿ

 

ಸವಿ ಸಿಹಿಯೆಂದು ಸವಿದರಲ್ಲ

ಹಣ್ಣಿನ  ರಾಣಿಯಿವಳೆಂದರಲ್ಲ

ಬಾಯಿ ಚಪಲಕೆ ತಿಂದೆಸೆದರೂ

ಬೀಜದಿಂ ನವ ಮಾವ ಸಂಕುಲ!

- ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್